ಕಣ್ಣೂರು: ಹಗಲು ಹೊತ್ತಿನಲ್ಲೇ 12 ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಕಣ್ಣೂರು ಪರಿಯಾರತ್‍ನಲ್ಲಿ ನಡೆದಿದೆ. ಅಂಗಡಿಯಲ್ಲಿ ನಿಂತಿದ್ದ ಬಾಲಕಿಯನ್ನು ಕಾರಿನಲ್ಲಿ ಬಂದ ಇಬ್ಬರ ತಂಡ ಅಪಹರಿಸಲು ಯತ್ನಿಸಿತ್ತು.
ಚೆರುತ್ತಾಝ ಕಳಪ್ಪುರತ್ ಎಂಬಲ್ಲಿ ಈ ಘಟನೆ ನಡೆದಿದೆ. ಬಾಲಕಿಯು ತನ್ನ ಅಜ್ಜ ನಡೆಸುತ್ತಿದ್ದ ಅಂಗಡಿಯಲ್ಲಿದ್ದ ವೇಳೆ ಅಪಹರಣ ಯತ್ನ ನಡೆದಿದೆ.
ಘಟನೆ ವೇಳೆ ಮಗುವಿನ ಅಜ್ಜ ಅಂಗಡಿಯಲ್ಲಿ ಇರಲಿಲ್ಲ. ಗ್ರೇ ಕಲರ್ ಕಾರಿನಲ್ಲಿ ಬಂದವರು ಸಿಗರೇಟ್ ಬೇಕೆಂದು ಅಂಗಡಿಗೆ ಬಂದರು. ಇಲ್ಲ ಎಂದು ಹೇಳಿದಾಗ ವಾಪಸ್ ಹೋಗಿ ಮತ್ತೆ ಬಂದು ಚಾಕಲೇಟ್ ಕೇಳಿದರು. ಬಾಲಕಿ ಕ್ಯಾಂಡಿ ತೆಗೆದುಕೊಟ್ಟ ತಕ್ಷಣ, ಆಗಂತುಕರು ಬಾಲಕಿಯ ಕೈಗಳನ್ನು ಹಿಡಿದು ಕಾರಿನೊಳಗೆ ಹತ್ತಿಸಲು ಪ್ರಯತ್ನಿಸಿದರು.
ಆದರೆ ಇನ್ನೊಂದು ಕೈಯಿಂದ ಅಂಗಡಿಯಲ್ಲಿ ನೇತಾಡುತ್ತಿದ್ದ ಬಾಳೆಗೊನೆಯನ್ನು ಬಾಲಕಿ ಬಲವಾಗಿ ಹಿಡಿದಳು. ಈ ವೇಳೆ ಬೇರೆಯವರು ವಾಹನದಲ್ಲಿ ಬರುತ್ತಿರುವುದನ್ನು ಗಮನಿಸಿ ಬಾಲಕಿಯನ್ನು ಬಿಟ್ಟು ಕಾರು ಆಗಂತುಕರು ಪರಾರಿಯಾದರು. ತಕ್ಷಣ ಮಗು ಮನೆಗೆ ಬಂದು ಮನೆಯವರಿಗೆ ಮಾಹಿತಿ ನೀಡಿದೆ. ನಂತರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಳೆಗೊನೆ ಕಾರಣ ಪಾರಾದ ಬಾಲಕಿ: ಹಗಲು ವೇಳೆಯೇ 12 ರ ಹರೆಯದ ಬಾಲಕಿಯನ್ನು ಅಂಗಡಿಯಿಂದ ಅಪಹರಿಸಲು ಯತ್ನ: ನೇತಾಡುತ್ತಿದ್ದ ಬಾಳೆಗೊನೆಯಿಂದ ಪಾರಾದ ಬಾಲಕಿ
0
ಅಕ್ಟೋಬರ್ 18, 2022