ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 15ನೇ ವರ್ಷದ ಶಾರದೋತ್ಸವವು ಮಂಗಳವಾರ ಬೆಳಗ್ಗೆ ಶ್ರೀ ಶಾರದಾ ದೇವಿಯ ವಿಗ್ರಹ ಪ್ರತಿಷ್ಠೆ, ಮಹಾಗಣಪತಿ ಹೋಮದೊಂದಿಗೆ ಪ್ರಾರಂಭವಾಯಿತು. ರೈಲ್ವೇ ಇಲಾಖೆಯ ವೃತ್ತ ಉದ್ಯೋಗಿ ಕೊರಗಪ್ಪ ನಾಯ್ಕ ಕಾಡಮನೆ ಧ್ವಜಾರೋಹಣಗೈದರು.
ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ಟರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು, ವಾಹನ ಪೂಜೆ ಜರಗಿದವು. ನಂತರ ದಿ. ಆರ್.ಚಕ್ರೇಶ್ವರ್ ವೇದಿಕೆಯಲ್ಲಿ ಸಭಾಕಾರ್ಯಕ್ರಮ, ಸನ್ಮಾನ ಸಮಾರಂಭ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ಸಂಜೆ ಶ್ರೀ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕøತ ಪಡುಮಲೆ ಜಯರಾಮ ಪಾಟಾಳಿ ಇವರ ನಿರ್ದೇಶನದಲ್ಲಿ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಬದಿಯಡ್ಕದಲ್ಲಿ 15ನೇ ವರ್ಷದ ಶಾರದೋತ್ಸವ
0
ಅಕ್ಟೋಬರ್ 05, 2022