ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ.
ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿತ್ರದಲ್ಲಿ ಹಾವನ್ನು ಗುರುತಿಸುವುದು ನೆಟ್ಟಿಗರ ಫೇವರಿಟ್ ಟಾಸ್ಕ್ ಆಗಿದೆ. ಹಾವುಗಳೇ ಹಾಗೇ ಆಹಾರಕ್ಕಾಗಿ ಸಂಚು ಹಾಕುವಾಗ ಯಾರಿಗೂ ಗೊತ್ತಾಗದಂತೆ ಅವಿತು ಕುಳಿತುಬಿಡುತ್ತವೆ. ಅದನ್ನು ತಿಳಿಯದೇ ಹಾವನ್ನು ತುಳಿದು ಕಚ್ಚಿಸಿಕೊಂಡವರಿಗೂ ಕಡಿಮೆಯೇನಿಲ್ಲ.
ಮೇಲಿರುವ ಚಿತ್ರದಲ್ಲಿ ಒಣಗಿದ ಎಲೆಗಳ ನಡುವೆ ಒಂದು ಹಾವಿದೆ. ಆದರೆ, ಅಷ್ಟು ಸುಲಭವಾಗಿ ಅದು ಕಾಣುವುದಿಲ್ಲ. ಎಲೆಗಳ ಬಣ್ಣದಂತೆಯೇ ಹಾವಿನ ಬಣ್ಣವಿದ್ದು, ನೋಡುಗರನ್ನು ಗೊಂದಲಕ್ಕೀಡುಮಾಡುತ್ತದೆ. ಮೊದಲಿಗೆ ನೋಡಿದವರಿಗೆ ಕಂದು ಬಣ್ಣದ ಎಲೆಗಳು ಭೂಭಾಗವನ್ನು ಆಕ್ರಮಿಸಿರುವಂತೆ ಕಾಣುತ್ತದೆ. ನೀವೇನಾದರೂ ಬಹಳ ಸೂಕ್ಷ್ಮದಿಂದ ನೋಡಿದರೆ ಎಲೆಗಳ ನಡುವೆ ಸಣ್ಣದೊಂದು ಹಾವು ಕಾಣುತ್ತದೆ.
ನಿಮಗೆ 15 ಸೆಕೆಂಡ್ ಸಮಯ ಕೊಡಲಾಗುತ್ತದೆ. ಆ ಸಮಯದಲ್ಲಿ ನೀವು ಹಾವನ್ನು ಫೋಟೋದಲ್ಲಿ ಗುರುತಿಸಿದರೇ ನಿಮ್ಮ ಕಣ್ಣಿನ ಸಾಮರ್ಥ್ಯಕ್ಕೆ ನೀವೇ ಫುಲ್ ಮಾರ್ಕ್ಸ್ ಕೊಟ್ಟುಬಿಡಿ. ಒಂದು ವೇಳೆ ಹಾವನ್ನು ಗುರುತಿಸಲು ಆಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.