HEALTH TIPS

ಸವಲತ್ತುಗಳನ್ನು ಪಡೆಯುವ ಪ್ರಯತ್ನದಲ್ಲಿ ಹಿಂದೆಬೀಳಬಾರದು - ಶ್ರೀಧÀರ ನಾಯ್ಕ: ಕೇರಳ ಮರಾಟಿ ಶಾರಾದೋತ್ಸವ ಸಮಿತಿಯ 15ನೇ ವರ್ಷದ ಶಾರದೋತ್ಸವ ಸಮಾರೋಪ ಸಮಾರಂಭ


         ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 15ನೇ ವರ್ಷದ ಶ್ರೀ ಶಾರದೋತ್ಸವವು ವಿಜೃಂಭಣೆಯಿಂದ ಜರಗಿತು. ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಸಂಚಾಲಕ ಶ್ರೀಧರ ನಾಯ್ಕ ಮುಂಡೋಳುಮೂಲೆ ಬೆಂಗಳೂರು ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಮರಾಟಿ ಸಮುದಾಯದ ಮೀಸಲಾತಿಯನ್ನು ಹಿಂಪಡೆಯುವ ಸಲುವಾಗಿ ಸಮಾಜದ ಎಲ್ಲಾ ಸಂಘಟನೆಗಳೂ ಒಂದುಗೂಡಿ ಹೋರಾಟವನ್ನು ನಡೆಸಿದೆ. ಇದರ ಫಲವಾಗಿ ಮೀಸಲಾತಿ ಮತ್ತೆ ಲಭಿಸಿದೆ. ಈ ನಿಟ್ಟಿನಲ್ಲಿ ಹಿಂದುಳಿದ ನಮ್ಮ ಅನೇಕ ಕುಟುಂಬಗಳು ಮುಂದೆ ಬರಬೇಕಿದೆ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಶ್ರಮಪಡಬೇಕು ಎಂದರು. ಶಾರದೋತ್ಸವ ಸಮಿತಿಯ ಅಧ್ಯಕ್ಷ ರಾಜಗೋಪಾಲ ನವಕಾನ ಅಧ್ಯಕ್ಷತೆ ವಹಿಸಿದ್ದರು.
          ಪದ್ಮಶ್ರೀ ಪ್ರಶಸ್ತಿ ವಿಜೇತ ಮಹಾಲಿಂಗ ನಾಯ್ಕ ಅಮೈ ಅಡ್ಯನಡ್ಕ ಹಾಗೂ ಪೊಲೀಸ್ ಇಲಾಖೆಯಿಂದ ರಾಷ್ಟ್ರಪದಕ ಪುರಸ್ಕøತ ಕೋಝಿಕ್ಕೋಡ್ ಸಿಟಿ ಪೊಲೀಸ್ ಕಮಿಶನರ್ ಹರಿಶ್ಚಂದ್ರ ನಾಯ್ಕ ಅವರಿಗೆ ಆರ್. ಚಕ್ರೇಶ್ವರ್ ಸ್ಮರಣಾರ್ಥ ಪ್ರಶಸ್ತಿ, ಸಮಾಜಸೇವೆ ಮತ್ತು ಧಾರ್ಮಿಕ ಸೇವೆಗೈಯುತ್ತಿರುವ ಕಮಲ ಪೆರಡಾಲ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಂತಾರಾಷ್ಟ್ರೀಯ ಯೋಗಪಟು ತೃಪ್ತಿ ಮಾಡಾವು ಕಯ್ಯೂರು, ಮೆಡಿಕಲ್‍ನಲ್ಲಿ 2ನೇ ರ್ಯಾಂಕ್ ಪಡೆದ ಡಾ. ಕಾವ್ಯ ಬಿ.ಎನ್., ಇಂಜಿನಿಯರಿಂಗ್‍ನಲ್ಲಿ 8ನೇ ರ್ಯಾಂಕ್ ಪಡೆದ ಆಶಾ ಎ.ಅಮೆಕ್ಕಳ, ಬಿಇಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿಘ್ನೇಶ್ ಎ.ಜೆ. ಇವರನ್ನು ಅಭಿನಂದಿಸಲಾಯಿತು.  ಹಿರಿಯ ಯಕ್ಷಗಾನ ಕಲಾವಿದ ಗಡಿನಾಡ ಸಾಹಿತ್ಯ ಕಲಾ ಸಾಂಸ್ಕøತಿಕ ಅಕಾಡೆಮಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಚನಿಯಪ್ಪ ನಾಯ್ಕ ಮಾತನಾಡಿ ಇಂದಿನ ಮಕ್ಕಳ ಬಗ್ಗೆ ಹಾಗೂ ಹಿಂದಿನ ಕಾಲದ ಜನರ ಬಗ್ಗೆ ವಿಶ್ಲೇಷಣೆ ಮಾಡಿದರು. ಮೊಬೈಲ್ ಯಾವಾಗಲೂ ತಲೆತಗ್ಗಿಸುವಂತೆ ಮಾಡುತ್ತದೆ, ಪುಸ್ತಕವು ತಲೆ ಎತ್ತುವಂತೆ ಮಾಡುತ್ತದೆ ಎಂಬ ನೀತಿಪಾಠ ಹೇಳಿದರು. ಸೋಮವಾರಪೇಟೆಯ ಎಲ್.ಐ.ಸಿ. ಸೀನಿಯರ್ ಶಾಖಾ ಪ್ರಬಂಧಕ ಸತೀಶ್ ಕುಮಾರ್ ಕಯ್ಯಾರು ಮಾತನಾಡಿ ಸಮುದಾಯದ ಜನರು ಒಗ್ಗಟ್ಟಾಗಿ ಕೆಲಸ ಮಾಡಿದರೆ ನಮ್ಮ ಸಮಾಜವು ಇನ್ನೂ ಎತ್ತರಕ್ಕೆ ಬೆಳೆಯುವುದೆಂದು ಶುಭಾಶಂಸನೆಗೈಯ್ದರು.
         ಪುಣಚ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಐತ್ತಪ್ಪ ನಾಯ್ಕ ಅಡ್ಯನಡ್ಕ ಬಹುಮಾನ ವಿತರಿಸಿ ಮಾತನಾಡಿ ಶಾರದೋತ್ಸವ  ಸಮಿತಿಯ ವರ್ಷಂಪ್ರತಿ ನಮ್ಮ ಸಮಾಜದ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪೆÇ್ರೀತ್ಸಾಹಿಸುತ್ತಾರೆ. ಅಲ್ಲದೆ ಸಾಧಕರನ್ನು ಸನ್ಮಾನಿಸುವುದಲ್ಲದೆ ಇನ್ನಿತರ ಕ್ಷೇತ್ರಗಳಲ್ಲಿ ಮಿಂಚಿದ ಪ್ರತಿಭೆಗಳಿಗೆ ಅಭಿನಂದನೆಗಳನ್ನು ನೀಡುವುದು ಒಂದು ಒಳ್ಳೆಯ ಕಾರ್ಯಕ್ರಮ ಎಂದರು. ಶಾರದೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯರಾಮ ನಾಯ್ಕ ಕುಂಟಾಲುಮೂಲೆ ಸ್ವಾಗತಿಸಿ, ಕುಂಟಾಲುಮೂಲೆ ಯಶಸ್ವಿ ಮರಾಟಿ ಸೇವಾ ಸಂಘದ ಅಧ್ಯಕ್ಷ ಜಗದೀಶ ವಂದಿಸಿದರು. ವೈಷ್ಣವಿ ಕನಕಪ್ಪಾಡಿ ನಿರೂಪಿಸಿದರು. ಅಪರಾಹ್ನ ಕುಮಾರಿ ತೃಪ್ತಿ ಮಾಡಾವು ಯೋಗಪ್ರದರ್ಶನವನ್ನು ನೀಡಿ ಗಮನಸೆಳೆದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries