ಕಾಸರಗೋಡು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾಸರಗೋಡು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಕಾಸರಗೋಡು ಕುತ್ಯಾಳ ಶ್ರೀ ಜನಜೀವನ ಸಮಿತಿ ಕೂಡ್ಲು ನೇತೃತ್ವದಲ್ಲಿ ಕಾಸರಗೋಡು ಅಣಂಗೂರು ಶ್ರೀ ಶಾರದಾಂಬಾ ಸಭಾ ಭವನದಲ್ಲಿ ನಡೆದ 1600ನೇ ಮದ್ಯವರ್ಜನ ಶಿಬಿರ ಸಂಪನ್ನಗೊಂಡಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕುಟುಂಬದಿನ, ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಪಾಲ್ಗೊಂಡಿದ್ದ 155ಮಂದಿ ಪಾನಮುಕ್ತರಿಗೆ ಪಾನಮುಕ್ತ ಜೀವನದ ಬಗ್ಗೆ ಮಾರ್ಗದರ್ಶನ ನೀಡಿದ ಶ್ರೀಗಳು, ತಮ್ಮ ಭಾವೀ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವಂತೆ ಆಶೀರ್ವಚನ ನೀಡಿದರು.1600ನೇ ಮದ್ಯವರ್ಜನ ಶೀಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಆರ್. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಉಪ ಯುಕ್ತ ಬಾಲಚಂದ್ರನ್ ಡಿ, ದ.ಕ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂದೀಪ್ ಭಟ್, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ, ಉದ್ಯಮಿ ಅರಿಬೈಲ್ ಗೋಪಾಲ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಕಿರಣ್‍ಚಂದ್ರ ಕೆ.ವಿ ಆರ್, ಕಲಾವಿದೆ ರೂಪಶ್ರೀ ವರ್ಕಾಡಿ ಉಪಸ್ಥಿತರಿದ್ದರು.
ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಅವರುಶಿಬಿರಾರ್ಥಿಗಳು ಮತ್ತು ಕುಟುಂಬ ಸದಸ್ಯರಿಗೆ 'ಕುಟುಂಬ ದಿನ'ಕಾರ್ಯಕ್ರಮ ನೆರೇರಿಸಿಕೊಟ್ಟರು. ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಭಾಗ್, ವಲಯಾಧ್ಯಕ್ಷ ಸೂರಜ್ ಶೆಟ್ಟಿ, ಶಿಬಿರಾಧಿಕಾರಿ ದೇವಿಪ್ರಸಾದ್, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಣಂಗೂರಿನಲ್ಲಿ 1600ನೇ ಮದ್ಯವರ್ಜನ ಶಿಬಿರ ಸಂಪನ್ನ: ಎಡನೀರು ಶ್ರೀಗಳಿಂದ ಆಶೀರ್ವಚನ
0
ಅಕ್ಟೋಬರ್ 20, 2022
Tags