ತಿರುವನಂತಪುರ: ಸಂದೀಪಾನಂದ ಗಿರಿ ಅವರಿಗೆ ಜಿಲ್ಲಾ ಗ್ರಾಹಕ ಆಯೋಗ ಒಂದು ಲಕ್ಷ ದಂಡ ವಿಧಿಸಿದೆ. ಕೈಲಾಸ ಮಾನಸ ಸರೋವರ ಯಾತ್ರೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸದೆ ಭಕ್ತರಿಗೆ ವಂಚಿಸಿದ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತಿರುವನಂತಪುರ ಕುಡಪ್ಪನಕುನ್ನು ಮೂಲದವರಾದ ಬಿ. ಮೋಹನಕುಮಾರನ್ ಸಂದೀಪಾನಂದ ಗಿರಿ ವಿರುದ್ಧ ದೂರು ದಾಖಲಿಸಿದ್ದರು.
ಸಂದೀಪಾನಂದಗಿರಿ ಅವರು ಭಕ್ತರಿಗೆ ಮೂರು ದಿನಗಳ ಕೈಲಾಸ ಯಾತ್ರೆಯನ್ನು ಆಯೋಜಿಸಿದ್ದರು. ಇದಕ್ಕಾಗಿ ಹಣ ಪಡೆಯಲಾಗಿತ್ತು. ಆದರೆ ಎರಡು ದಿನಗಳ ಯಾತ್ರೆ ಮಾತ್ರ ಇದ್ದವು. ಮೊದಲ ಕೈಲಾಸ ಯಾತ್ರೆಯಲ್ಲಿ ಕೇವಲ ಎರಡು ಪ್ರದಕ್ಷಿಣೆಗಳನ್ನು ಮಾಡಲು ಸಾಧ್ಯವಾದ ಕಾರಣ, ಅವರು ಎರಡನೇ ಬಾರಿಗೆ ಪ್ರಯಾಣಿಸಿದರು. ಆದರೆ ಎರಡನೇ ಬಾರಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೋಹನಕುಮಾರನ್ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
2011 ಮತ್ತು 2016ರಲ್ಲಿ ಸಂದೀಪಾನಂದ ಗಿರಿಯವರ ಕೈಲಾಸ ಯಾತ್ರೆ ಆಯೋಜಿಸಿದ್ದರು. ಎರಡನೇ ಪ್ರವಾಸಕ್ಕೆ ಮೋಹನಕುಮಾರ್ 2,45,000 ರೂ.ನೀಡಿದ್ದರು. ಆದರೆ ಬಳಿಕ ಮೊಕದ್ದಮೆ ಮತ್ತು ಇತರ ನ್ಯಾಯಾಲಯದ ವೆಚ್ಚಗಳಿಗಾಗಿ ಹಣವನ್ನು ಕಳೆದುಕೊಂಡರು. ಇದರ ಜತೆಗೆ ದೂರುದಾರರ ಮಾನಸಿಕ ಯಾತನೆಯನ್ನೂ ಪರಿಗಣಿಸಿದ ನ್ಯಾಯಾಲಯ ಸಂದೀಪಾನಂದ ಗಿರಿಗೆ ದಂಡ ವಿಧಿಸಿದೆ.
ಸಂದೀಪಾನಂದ ಗಿರಿಗೆ 1 ಲಕ್ಷ ದಂಡ: ಕೈಲಾಸ ಯಾತ್ರೆಯ ಹೆಸರಿನಲ್ಲಿ ಹಣ ಸುಲಿಗೆ ಮಾಡಿದ್ದಕ್ಕೆ ಕ್ರಮ: ಗ್ರಾಹಕ ಆಯೋಗದಿಂದ ತೀರ್ಪು
0
ಅಕ್ಟೋಬರ್ 21, 2022
Tags