ನವದೆಹಲಿ: ಕಳೆದ ಎರಡು ತಿಂಗಳಲ್ಲಿ ಉದ್ಯೋಗ ಕೋರಿ 1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಈ ಪೈಕಿ ಪೈಲಟ್ ಹುದ್ದೆಗಾಗಿ 1,752 ಕ್ಕೂ ಹೆಚ್ಚು ಅರ್ಜಿಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಾಗಿ 72,000 ಅರ್ಜಿಗಳು ಬಂದಿವೆ ಎಂದು ಏರ್ ಇಂಡಿಯಾ ಗುರುವಾರ ತಿಳಿಸಿದೆ.
ವಿಮಾನಯಾನ ಸಂಸ್ಥೆಯು ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲು ಮೂರು ವರ್ಷಗಳ ಅನುಭವ ಹೊಂದಿರುವ ಮ್ಯಾನೇಜ್‌ಮೆಂಟ್ ಸ್ನಾತಕೋತ್ತರ ಪದವೀಧರರಿಂದ ಒಂದು ವಾರದಲ್ಲಿ 25,000 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಮತ್ತು ಕೇರಳದ ಕೊಚ್ಚಿಯಲ್ಲಿ ಹೊಸ ಟೆಕ್ ಕೇಂದ್ರಕ್ಕಾಗಿ 2,000 ಕ್ಕೂ ಹೆಚ್ಚು ಅರ್ಜಿಗಳ ಬಂದಿವೆ ಎಂದು ಏರ್ ಇಂಡಿಯಾ ಹೇಳಿದೆ.
ಪ್ರಸ್ತುತ ಏರ್ ಇಂಡಿಯಾ ಸುಮಾರು 12,000 ಸಿಬ್ಬಂದಿಯನ್ನು ಹೊಂದಿದೆ, ಅದರಲ್ಲಿ 8,000 ಖಾಯಂ ಮತ್ತು ಉಳಿದವರು ಗುತ್ತಿಗೆ ಆಧಾರಿತ ನೌಕರರಾಗಿದ್ದಾರೆ. ಏರ್ ಇಂಡಿಯಾ ತನ್ನ ಹಾರಾಟವನ್ನು ಪೂರ್ಣ ಪ್ರಮಾಣದಲ್ಲಿ ಹೆಚ್ಚಿಸಲು ಆಕ್ರಮಣಕಾರಿ ವಿಸ್ತರಣಾ ಯೋಜನೆಗಳನ್ನು ಹೊಂದಿದೆ.
ನ ಐದು ವರ್ಷಗಳಲ್ಲಿ ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಪಾಲನ್ನು ಶೇ. 30 ರಷ್ಟು ಹೆಚ್ಚಿಸಲು ಮತ್ತು ಅದರ ಫ್ಲೀಟ್ ಗಾತ್ರವನ್ನು ಮೂರು ಪಟ್ಟು ಹೆಚ್ಚಿಸಲು ಯೋಜಿಸಿದೆ.
ಟಾಟಾ ಕಂಪನಿ ಪ್ರಕಾರ, ಏರ್ ಇಂಡಿಯಾ ಕಳೆದ15 ವರ್ಷಗಳಿಂದ ಕಾರ್ಯಾಚರಣೆಯೇತರ ಪ್ರದೇಶಗಳಲ್ಲಿ ನೇಮಕಾತಿ ಮಾಡಿಕೊಂಡಿಲ್ಲ. ಹೀಗಾಗಿ ಅದರ ವ್ಯವಹಾರದ ಎಲ್ಲಾ ಕ್ಷೇತ್ರಗಳಲ್ಲಿ ತ್ವರಿತವಾಗಿ ಪ್ರತಿಭಾವಂತರ ಅಗತ್ಯ ಇದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ(ಡಿಐಪಿಎಎಂ) ಕಾರ್ಯದರ್ಶಿ ಹಾಗೂ ಏರ್ ಇಂಡಿಯಾ ಖಾಸಗೀಕರಣ ಪ್ರಕ್ರಿಯೆಯ ಮೇಲ್ವಿಚಾರಣೆ ವಹಿಸಿಕೊಂಡಿದ್ದ ಪ್ರಮುಖ ಅಧಿಕಾರಿ ತುಹಿನ್ ಕಾಂತಾ ಪಾಂಡೆ ಅವರು ಹೇಳಿದ್ದಾರೆ.