ಔರಂಗಾಬಾದ್: ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ದೇಶದಾದ್ಯಂತ ಸುಮಾರು 200 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಇಲ್ಲಿ ತಿಳಿಸಿದರು.
ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಬೋಗಿ ನಿರ್ವಹಣಾ ಕಾರ್ಖಾನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಮೇಲ್ದರ್ಜೆಗೆ ಏರಿಸುವ ಕಾಮಗಾರಿ 32 ನಿಲ್ದಾಣಗಳಲ್ಲಿ ಆರಂಭವಾಗಿದೆ.
47 ನಿಲ್ದಾಣಗಳಿಗೆ ಸಂಬಂಧಿಸಿ ಟೆಂಡರ್ ಕರೆಯಲಾಗುತ್ತಿದೆ' ಎಂದರು.
ಒಟ್ಟು 200 ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಫುಡ್‌ಕೋರ್ಟ್, ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳ ನಿರ್ಮಾಣ, ಮಕ್ಕಳಿಗೆ ಮನರಂಜನೆ ತಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಪ್ರಾದೇಶಿಕ, ಸ್ಥಳೀಯ ಉತ್ಪನ್ನಗಳ ಮಾರಾಟದ ವೇದಿಕೆಯಾಗಿಯೂ ರೈಲ್ವೆ ನಿಲ್ದಾಣ ಬಳಕೆಯಾಗಲಿದೆ ಎಂದರು. ದೇಶದಾದ್ಯಂತ ಭವಿಷ್ಯದಲ್ಲಿ ಸುಮಾರು 400 ವಂದೇ ಮಾತರಂ ರೈಲು ಸಂಚರಿಸಲಿವೆ. ಈ ಪೈಕಿ 100 ಅನ್ನು ಮಹಾರಾಷ್ಟ್ರದ ಲಾತೂರ್‌ನಲ್ಲಿ ಆಭಿವೃದ್ಧಿಪಡಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.