ನವದೆಹಲಿ: ಯುಪಿಐ ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಮೂಲಕ ನಡೆಯುವ 2000 ರೂಪಾಯಿರೆಗಿನ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಎನ್ ಪಿಸಿಐ ಹೇಳಿದೆ.
ರುಪೇ ಕ್ರೆಡಿಟ್ ಕಾರ್ಡ್ ಕಳೆದ 4 ವರ್ಷಗಳಿಂದ ಚಾಲ್ತಿಯಲ್ಲಿದ್ದು, ಬಹುತೇಕ ಬ್ಯಾಂಕ್ ಗಳು ವಾಣಿಜ್ಯ ಹಾಗೂ ಚಿಲ್ಲರೆ ವಿಭಾಗಗಳಲ್ಲಿ ಇನ್ಕ್ರಿಮೆಂಟಲ್ ಕಾರ್ಡ್ ಗಳನ್ನು ವಿತರಿಸುತ್ತಿವೆ.
ಆಪ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ನಡೆಸುವ ವಹಿವಾಟುಗಳಿಗೆ ಯುಪಿಐ ಪಿನ್ ಸೆಟ್ ಮಾಡುವ ಪ್ರಕ್ರಿಯೆಯಲ್ಲಿ, ಕ್ರೆಡಿಟ್ ಕಾರ್ಡ್ ಚಾಲಿತ ಎಲ್ಲಾ ವಹಿವಾಟುಗಳಿಗೆ ಗ್ರಾಹಕರ ಅನುಮತಿಯನ್ನು ಪಡೆಯಲಾಗುತ್ತದೆ. ರುಪೇ ಕ್ರೆಡಿಟ್ ಕಾರ್ಡ್ ಗಳನ್ನು ಅಂತಾರಾಷ್ಟ್ರೀಯ ವಹಿವಾಟುಗಳಲ್ಲಿ ಬಳಕೆ ಮಾಡಬೇಕಾದರೆ, ಆಪ್ ಗಳಲ್ಲಿ ಈಗಿರುವ ಪ್ರಕ್ರಿಯೆಗಳೇ ಕ್ರೆಡಿಟ್ ಕಾರ್ಡ್ ಗಳಿಗೂ ಅನ್ವಯಿಸುತ್ತದೆ ಎಂದು ಎನ್ ಪಿಸಿಐ ಹೇಳಿದೆ.
ಈ ವಿಭಾಗದಲ್ಲಿ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ವಿನಾಯಿತಿ 2000 ಅಥವಾ ಅದಕ್ಕಿಂತಲೂ ಕಡಿಮೆ ಹಣದ ವಹಿವಾಟುಗಳಿಗೆ ಅನ್ವಯಿಸುತ್ತದೆ. ಯಾವುದೇ ಓರ್ವ ವರ್ತಕ ತನ್ನ ಮಳಿಗೆಯಲ್ಲಿ ಗ್ರಾಹಕರ ಮೂಲಕ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳ ಮೂಲಕ ಪಡೆಯುವ ಪ್ರತಿ ಪಾವತಿಗೂ ಆತ ಬ್ಯಾಂಕ್ ಗೆ ಪಾವತಿಸುವ ಶುಲ್ಕವನ್ನು ಎಂಡಿಆರ್ ಎನ್ನಲಾಗುತ್ತದೆ.