ಮಂಜೇಶ್ವರ: ಕೆ .ಪಿ.ಎಸ್. ಟಿ.ಎ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸ್ವದೇಶ ಮೆಘಾ ಕ್ವಿಜ್ ಜಿ ಎಲ್ ಪಿ ಶಾಲೆ ಮುಳಿಂಜದಲ್ಲಿ ಜರಗಿತು.
ಗಾಂಧೀಜಯಂತಿಯ ಭಾಗವಾಗಿ ನಡೆದ ಸ್ವದೇಶ ಮೆಘಾ ಕ್ವಿಜ್ ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಕೆ .ಪಿ.ಎಸ್. ಟಿ.ಎ ಅಧ್ಯಕ್ಷ ಜಬ್ಬಾರ್. ಬಿ.ವಹಿಸಿದರು. ಕಾರ್ಯಕ್ರಮದ ಉಧ್ಘಾಟನೆಯನ್ನು ಸಂಘಟನೆ ಯ ಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀ ಕೆ.ವಿ ಜನಾರ್ಧನನ್ ನಿರ್ವಹಿಸಿದರು.
ಸಭೆಯಲ್ಲಿ ವಿದ್ಯಾಭ್ಯಾದ ಜಿಲ್ಲಾ ಕೋಶಾಧಿಕಾರಿ ವಿಮಲ್ ಅಡಿಯೋಡಿ, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ವೈ ರಾವ್, ಉಪಜಿಲ್ಲಾ ಉಪಾಧ್ಯಕ್ಷ ಮೂಸಕುಂಞÂ್ಞ . ಡಿ, ಜಿಲ್ಲಾ ಮೈನಾರಿಟಿ ಸೆಲ್ ಮಾಜಿ ಅಧ್ಯಕ್ಷ ರಾಧಾಕೃಷ್ಣನ್.ಆರ್.
ಶುಭಾಶಂಸನೆಗೈದರು.
ಎಲ್.ಪಿ,ಯು.ಪಿ,ಹೈಸ್ಕೂಲ್, ಹೈಯರ್ ಸೆಕಂಡರಿ ವಿಭಾಗಗಳ ರಸಪ್ರಶ್ನೆಯಲ್ಲಿ ಮಕ್ಕಳು ಭಾಗವಹಿಸಿ ಬಹುಮಾನಗಳಿಸಿ, ಜಿಲ್ಲಾ ಮಟ್ಟದ ಸ್ವರ್ಧೆಗೆ ಆಯ್ಕೆಯಾದರು. ಎಲ್.ಪಿ ವಿಭಾಗದಲ್ಲಿ ಪ್ರಥಮ: ಫಾತಿಮತ್ ಬತೂಲ್. ಜಿ.ಎಲ್.ಪಿ.ಶಾಲೆ. ಮುಳಿಂಜ, ದ್ವಿತೀಯ: ಜಂಶೀರ.ಜಿ.ಡಬ್ಲ್ಯೂ. ಎಲ್.ಪಿ.ಎಸ್ ಮಂಜೇಶ್ವರ, ಯು.ಪಿ. ವಿಭಾಗದಲ್ಲಿ ಪ್ರಥಮ: ಕುಮಾರಿ ತನ್ವಿ ಎಸ್.ಎಸ್.ಬಿ ಎ.ಯು.ಪಿ.ಎಸ್ ಐಲ, ದ್ವಿತೀಯ:ಸೃಜನ್ ಬಿ.ಎ.ಯು.ಪಿ.ಎಸ್.ಪಾತೂರು, ಹೈಸ್ಕೂಲ್ ವಿಭಾಗದಲ್ಲಿ: ಪ್ರಥಮ: ಕೆ.ಪಿ.ಪೂಜಾಲಕ್ಷ್ಮೀ .ಎಸ್.ಎ.ಟಿ.ಎಚ್. ಎಸ್. ಮಂಜೇಶ್ವರ
ದ್ವಿತೀಯ:ಶುಭದ .ಎಸ್.ವಿ.ವಿ.ಎಚ್. ಎಸ್. ಮಿಯಪದವು ಆಯ್ಕೆಯಾಗಿರುವರು. ವಿಜಯಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಲಾಯಿತು. ಸಭೆಯಲ್ಲಿ ಪುಷ್ಪಲತ ಟೀಚರ್, ಅಪ್ಸ ಟೀಚರ್ ಉಪಸ್ಥಿತರಿದ್ದರು. ಕೆ.ಪಿ.ಎಸ್. ಟಿ. ಎ ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ತರ್ ಸ್ವಾಗತಿಸಿ, ಕೋಶಾಧಿಕಾರಿ ಸೌಮ್ಯ ಕುಳೂರು ವಂದಿಸಿದರು.
ಕೆ .ಪಿ.ಎಸ್. ಟಿ.ಎ ಮಂಜೇಶ್ವರ ಸ್ವದೇಶ ಮೆಘಾ ಕ್ವಿಜ್ 2022
0
ಅಕ್ಟೋಬರ್ 06, 2022
Tags