ಕಾಸರಗೋಡು: ಮಾತಾ ಅಮೃತಾನಂದಮಯಿ ಮಠದ ಆಶ್ರಯದಲ್ಲಿ ಅಮ್ಮನವರ ಜನ್ಮದಿನಾಚರಣೆಯ ನಿಮಿತ್ತ 'ಅಮೃತೋತ್ಸವ-2022'ನ್ನು ಕಾಸರಗೋಡು ವಿವೇಕಾನಂದನಗರದ ಮಾತಾ ಅಮೃತಾನಂದ ಮಾಯಿ ಮಠದಲ್ಲಿ ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಕಾಸರಗೋಡು ಮಠದ ಮಠಾಧೀಶ ಬ್ರಹ್ಮಚಾರಿ ವೇದವೇದ್ಯಾಮೃತ ಚೈತನ್ಯ ಅವರು ಉದ್ಘಾಟಿಸಿದರು. ನಂತರ ವಿವಿಧ ಭಜನಾ ತಂಡಗಳ ಭಕ್ತಿ ಸುಧಾ ಕಾರ್ಯಕ್ರಮ ನಡೆಯಿತು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಸಾಂಸ್ಕøತಿಕ ಕೂಟ ಉದ್ಘಾಟಿಸಿದರು. ಬ್ರಹ್ಮ ವೇದವೇದ್ಯಾಮೃತ ಚೈತನ್ಯ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಜನನಿ, ಕಾಞಂಗಾಡ್ ಅಮೃತ ವಿದ್ಯಾಲಯದ ಪ್ರಾಂಶುಪಾಲ ಬ್ರಹ್ಮಾ. ಗುರುದೀಪಾಮೃತ ಚೈತನ್ಯ ಉಪಸ್ಥಿತರಿದ್ದರು. ಕುಮಾರ ಸ್ವಾಮಿ, ಕಾಸರಗೋಡು ಮಠದ ಹಿರಿಯ ಸೇವಾ ಕಾರ್ಯಕರ್ತ
ರಮಾನಂದ ಬಂಕೇರ,ಹರಿಶ್ಚಂದ್ರ ಶೆಟ್ಟಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕಿ ಜಯಶೀಲಾ ಸ್ವಾಗತಿಸಿದರು. ದೇವಿಪ್ರಸಾದ್ ಧನ್ಯವಾದವಿತ್ತರು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಮಾತಾ ಅಮೃತಾನಂದಮಯಿ ಜನ್ಮದಿನಾಚರಣೆ-'ಅಮೃತೋತ್ಸವಂ-2022'ಕಾರ್ಯಕ್ರಮ
0
ಅಕ್ಟೋಬರ್ 24, 2022
Tags