ಸಿಂಗಪುರ: ಭಾರತವು
ಸಿಂಗಪುರಕ್ಕೆ 2025ರಿಂದ ಹಸಿರು ಇಂಧನವನ್ನು (ನೀರಿನ ಕಣಗಳನ್ನು ವಿದ್ಯುದ್ವಿಶ್ಲೇಷಣೆ
ಮೂಲಕ ಬೇರ್ಪಡಿಸಿ ತಯಾರಿಸಿರುವ ಜಲಜನಕ) ರಫ್ತು ಮಾಡಲಿದೆ. ಇದಕ್ಕಾಗಿ ಭಾರತ ಮೂಲದ
ಸಂಸ್ಥೆ ಗ್ರೀನ್‌ಕೊ ಮತ್ತು ಸಿಂಗಪುರದ ಕೆಪ್ಪೆಲ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳು
ಮಂಗಳವಾರ ಒಪ್ಪಂದ ಮಾಡಿಕೊಂಡಿವೆ.
ವಾರ್ಷಿಕ
2,50,000 ಟನ್ ಹಸಿರು ಜಲಜನಕವನ್ನು ಕೆಪ್ಪೆಲ್ ಸ್ಥಾಪಿಸುತ್ತಿರುವ 600 ಮೆಗಾ
ವ್ಯಾಟ್ ವಿದ್ಯುತ್ ಘಟಕಕ್ಕೆ ರಫ್ತು ಮಾಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇದೇ
ಮೊದಲ ಬಾರಿಗೆ ಭಾರತವು ಇಂಧನವನ್ನು ರಫ್ತು ಮಾಡುತ್ತಿರುವುದು ಎಂದು ಗ್ರೀನ್‌ಕೊ
ಸಂಸ್ಥೆಯ ಅಧ್ಯಕ್ಷ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಕೊಲ್ಲಿ ತಿಳಿಸಿದರು.