ಡೆಹ್ರಡೂನ್: ಉತ್ತರಾಖಂಡ ರಾಜ್ಯದ ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಒಳಗಿನ ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪಿಸಲು ಮುಂಬೈ ಉದ್ಯಮಿಯೊಬ್ಬರು 230 ಕೆಜಿ ಚಿನ್ನ ಅರ್ಪಿಸಿದ್ದಾರೆ.
ಮುಂಬೈನ ವಜ್ರ ವ್ಯಾಪಾರಿಯೊಬ್ಬರು ಕೇದಾರನಾಥ ದೇವಸ್ಥಾನಕ್ಕೆ 230 ಕೆಜಿ ಚಿನ್ನ ಅರ್ಪಿಸಿದ್ದಾರೆ.
ಇದರಿಂದ ಗೋಡೆಗಳಿಗೆ ಚಿನ್ನದ ಹಾಳೆಗಳನ್ನು ಅಳವಡಿಸಲಾಗಿದೆ. ಈ ಹಾಳೆಗಳಲ್ಲಿ ಶಿವ, ಹಾವು , ನಂದಿ, ಡಮರುಗ, ತ್ರಿಶೂಲದ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ಈ ಹಿಂದೆ ದೇವಾಲಯದ ಗರ್ಭ ಗುಡಿಯ ಗೋಡೆಗಳಿಗೆ ಬೆಳ್ಳಿಯ ಹಾಳೆಗಳನ್ನು ಅಳವಡಿಸಲಾಗಿತ್ತು. ಈ ಹಾಳೆಗಳನ್ನು ತೆಗೆದು ಬಂಗಾರದ ಹಾಳೆಗನ್ನು ಜೋಡಿಸಲಾಗಿದೆ. ಈ ಕೆಲಸಕ್ಕೆ ಉತ್ತರಾಖಂಡ ಸರ್ಕಾರ ಕೂಡ ಅನುಮತಿ ನೀಡಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ಈ ಹಾಳೆಗಳನ್ನು ಅಳವಡಿಸಲು 230 ಕೆ.ಜಿ ಚಿನ್ನವನ್ನು ಬಳಕೆ ಮಾಡಲಾಗಿದೆ. ಇದನ್ನು ಮುಂಬೈ ವಜ್ರದ ವ್ಯಾಪಾರಿ ನೀಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ. ಈ ನಡುವೆ ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪನ ಮಾಡಬಾರದು ಎಂದು ಸ್ಥಳೀಯ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.