ಬದಿಯಡ್ಕ: ಬಳ್ಳಂಬೆಟ್ಟು ಪರಿವಾರ ಸಹಿತ ಶ್ರೀ ಶಾಸ್ತಾರ ಸ್ವಾಮಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು 2023 ಜನವರಿ 24 ರಿಂದ 26 ರವರೆಗೆ ನಡೆಯಲಿದೆ. ಇದರ ಪೂರ್ವಭಾವಿ ಸಭೆ ಶ್ರೀ ದೇವರ ಸನ್ನಿಧಾನದಲ್ಲಿ ನಡೆಯಿತು. ಈ ಸಭೆಯಲ್ಲಿ ಬ್ರಹ್ಮಕಲೋತ್ಸವದ ಸಮಿತಿಯನ್ನು ರಚಿಸಲಾಯಿತು.
ಪದಾಧಿಕಾರಿಗಳಾಗಿ ರವಿಶಂಕರ ಭಟ್(ಮಹಾಪೋಷಕ), ವಸಂತ ಪೈ ಬದಿಯಡ್ಕ(ಗೌರವಾಧ್ಯಕ್ಷರು), ಲಕ್ಷ್ಮೀನಾರಾಯಣ ಪೈ(ಅಧ್ಯಕ್ಷ), ಸುಬ್ರಹ್ಮಣ್ಯ ಪೈ ಬಳ್ಳಂಬೆಟ್ಟು (ಪ್ರಧಾನ ಕಾರ್ಯದರ್ಶಿ), ಸುಬ್ರಹ್ಮಣ್ಯ ವೈ ಯೇನಂಕೂಡ್ಲು(ಕೋಶಾಧಿಕಾರಿ), ಅರವಿಂದ ಪೈ ಬದಿಯಡ್ಕ(ಉಪಾಧ್ಯಕ್ಷರು), ತಾರಾನಾಥ ಪೈ ಉಕ್ಕಿನಡ್ಕ(ಜೊತೆ ಕಾರ್ಯದರ್ಶಿ) ಹಾಗೂ ಇತರರನ್ನು ಆರಿಸಲಾಯಿತು. ಸಭೆಯಲ್ಲಿ ಈಶ್ವರ ಭಟ್ ಗದ್ದೆಮನೆ ಬಳ್ಳಂಬೆಟ್ಟು, ವಿಷ್ಣು ಭಟ್ ಕೋರಿಕ್ಕಾರು, ಸೀತಾರಾಮ ಪೈ ಉಡುಪಿ, ಮಂಜುನಾಥ ಪೈ ಪಾಣಾಜೆ, ಗಣೇಶ್ ಪೈ ಬದಿಯಡ್ಕ, ರಾಜಾರಾಮ ಪೈ ಗೋವಾ ಹಾಗೂ ಭಕ್ತ ಬಾಂಧವರು ಭಾಗವಹಿಸಿದರು. ಹಲವು ಉಪಸಮಿತಿಗಳನ್ನು ರಚಿಸಲಾಯಿತು.
ಬಳ್ಳಂಬೆಟ್ಟು ಪರಿವಾರ ಸಹಿತ ಶ್ರೀ ಶಾಸ್ತಾರ ಸ್ವಾಮಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ ಜನವರಿ 24 ರಿಂದ: ಬ್ರ್ರಹ್ಮಕಲಶೋತ್ಸವ ಸಮಿತಿ ರಚನೆ
0
ಅಕ್ಟೋಬರ್ 20, 2022
Tags