ನವದೆಹಲಿ: ಸೆಪ್ಟೆಂಬರ್ 17ರಿಂದ ಆರಂಭಗೊಂಡು ಶನಿವಾರದವರೆಗೆ ನಡೆದ ರಕ್ತದಾನ ಅಮೃತ ಮಹೋತ್ಸವದಲ್ಲಿ 2.5 ಲಕ್ಷ ಮಂದಿ ರಕ್ತದಾನ ಮಾಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಹೇಳಿದ್ದಾರೆ.
ರಾಷ್ಟ್ರೀಯ ರಕ್ತದಾನ ದಿನದ ಅಂಗವಾಗಿ ದೆಹಲಿಯ ಏಮ್ಸ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ರಕ್ತದಾನ ಅಮೃತ ಮಹೋತ್ಸವದ ಯಶಸ್ಸು ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ಸಹಕಾರಿಯಾಗಲಿದೆ' ಎಂದಿದ್ದಾರೆ.