ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಮೊದಲ 6 ತಿಂಗಳಲ್ಲಿ ಗುಜರಿ (ಸ್ಕ್ರಾಪ್) ಮಾರಾಟದಿಂದ ₹ 2,582 ಕೋಟಿ ಆದಾಯ ಗಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
2021ನೇ ವರ್ಷಕ್ಕೆ ಹೋಲಿಸಿದರೆ ಶೇ.28ರಷ್ಟು ಹೆಚ್ಚಳವಾಗಿದೆ.ಕಳೆದ ವರ್ಷ ₹ 2003 ಕೋಟಿ ಸಂಗ್ರಹವಾಗಿತ್ತು ಎಂದು ರೈಲ್ವೆ ಇಲಾಖೆ ಹೇಳಿದೆ.ಗುಜರಿ ವಸ್ತುಗಳನ್ನು ಇ-ಹರಾಜಿನಲ್ಲಿ ಮಾರಾಟ ಮಾಡುವ ಮೂಲಕ ಪಾರದರ್ಶಕವಾಗಿ ವಹಿವಾಟು ನಡೆಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
2022-23ನೇ ಸಾಲಿಗೆ ಗುಜರಿ ವಸ್ತುಗಳ ಮಾರಾಟದಿಂದ ₹4,400 ಕೋಟಿ ಸಂಗ್ರಹಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಕಳೆದ ವರ್ಷ 3,60,732 ಮೆಟ್ರಿಕ್ ಟನ್ ಮಾರಾಟ ಮಾಡಲಾಗಿತ್ತು. ಈ ವರ್ಷ ಮೊದಲ 6 ತಿಂಗಳಲ್ಲಿ 3,93,421 ಮೆಟ್ರಿಕ್ ಟನ್ ಗುಜರಿಯನ್ನು ವಿಲೇವಾರಿ ಮಾಡಲಾಗಿದೆ.
1751 ವ್ಯಾಗನ್‌ಗಳು, 1421 ಕೋಚ್‌ಗಳು ಮತ್ತು 97 ಎಂಜಿನ್‌ಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.