ಅಕ್ಟೋಬರ್ 25ಕ್ಕೆ ಈ ವರ್ಷದ 2ನೇ ಸೂರ್ಯಗ್ರಹಣ ಸಂಭವಿಸಲಿದೆ, ಅದರಲ್ಲೂ ದೀಪಾವಳಿ ಆಚರಣೆಯ ಮಾರನೇಯ ದಿನ, ಗೋವರ್ಧನ ಪೂಜೆಯ ಮುನ್ನ ದಿನ ಪಾರ್ಶ್ವಸೂರ್ಯಗ್ರಹಣ ಸಂಭವಿಸಲಿದೆ.
ಗ್ರಹಣ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುವುದು, ಗ್ರಹಣ ಸಮಯದಲ್ಲಿ ದೇವಾಲಯಗಳ ಬಾಗಿಲು ಯಾಕೆ ತೆರೆಯುವುದಿಲ್ಲ? ಇದರ ಹಿಂದಿರುವ ಕಾರಣವೇನು ಎಂದು ನೋಡೋಣ ಬನ್ನಿ:
ಗ್ರಹಣದ ಸಮಯದಲ್ಲಿ ಬಾಗಿಲು ಮುಚ್ಚುವುದು ಏಕೆ?
ಸೂರ್ಯ ಹಾಗೂ ಚಂದ್ರ ಭೂಮಿಗೆ ಬೆಳಕು ನೀಡುವ ಗ್ರಹಗಳಾಗಿವೆ. ಗ್ರಹಣವಾದಾಗ ಅವುಗಳ ಬೆಳಕು ಭೂಮಿಗೆ ತಲುಪುವುದಿಲ್ಲ, ಈ ಅವಧಿಯಲ್ಲಿ ನೆಗೆಟಿವ್ ಎನರ್ಜಿ ತುಂಬಾ ಇರುತ್ತದೆ, ಈ ಸಮಯದಲ್ಲಿ ಬಾಗಿಲು ತೆರೆದಿಟ್ಟರೆ ದೇವಾಲಯದಲ್ಲಿರು ದೈವಿಕ ಶಕ್ತಿ ಮೇಲೆ ಪ್ರಭಾವ ಬೀರುವುದು, ಈ ಕಾರಣದಿಂದಾಗಿ ದೇವಾಲಯದ ಬಾಗಿಲು ಗ್ರಹಣದ ಸಮಯದಲ್ಲಿ ಮುಚ್ಚಿರಲಾಗುವುದು.
ಗ್ರಹಣದ ದೋಷ ತಟ್ಟದಿರಲು ತುಳಸಿ ಎಲೆ ಹಾಕಲಾಗುವುದು
ದೇವಾಲಯದ ವಿಗ್ರಹಗಳಿಗೆ ಗ್ರಹಣದ ಋಣಾತ್ಮಕ ಶಕ್ತಿ ತಾಗದಿರಲು ತುಳಸಿ ಎಲೆಗಳನ್ನು ಹಾಕಿಡಲಾಗುವುದು, ಹಾನಿಕಾರಕ ಕಿರಣಗಳನ್ನು ಹೀರಿಕೊಳ್ಳುವ ಶಕ್ತಿ ತುಳಸಿಎಲೆಗೆ ಇದೆ, ಹಾಗಾಗಿ ಹೀಗೆ ಮಾಡಲಾಗುವುದು.
ಭಾರತದಲ್ಲಿ ಒಂದೇ ಒಂದು ದೇವಾಲಯದ ಬಾಗಿಲು ತೆರೆದಿರುತ್ತದೆ
ಗ್ರಹಣದ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಾಗುವುದು, ಆದರೆ ಶ್ರೀ ಕಾಳಹಸ್ತಿಯಲ್ಲಿರುವ ಕಾಳಹಸ್ತೀಶ್ವರ ದೇವಾಲಯದ ಬಾಗಿಲು ಮಾತ್ರ ತೆರೆದಿರುತ್ತದೆ. ಇಲ್ಲಿ ರಾಹು-ಕೇತುಗಳಿಗೆ ಪೂಜೆಯನ್ನು ಮಾಡಲಾಗುವುದು ಹಾಗಾಗಿ ಗ್ರಹಣದ ಪ್ರಭಾವ ಈ ದೇವಾಲಯದ ಮೇಲೆ ಬರುವುದಿಲ್ಲ.
ಪಂಚಾಂಗದ ಪ್ರಕಾರ ಗ್ರಹಣ ಉಂಟಾಗಲು ಕಾರಣ ರಾಹು-ಕೇತು. ಈ ದೇವಾಲಯದಲ್ಲಿ ರಾಹು-ಕೇತುವನ್ನು ಪೂಜಿಸುತ್ತಿರುವುದರಿಂದ ಗ್ರಹಣದ ಸಮಯದಲ್ಲೂ ಬಾಗಿಲು ತೆರೆದಿರುತ್ತದೆ.