ಮಲಪ್ಪುರಂ: ಮನೆಯಲ್ಲಿ ಹೆರಿಗೆಗೆ ಉತ್ತೇಜನ ನೀಡುವ ಗುಂಪುಗಳು ರಾಜ್ಯದಲ್ಲಿ ಸಕ್ರಿಯವಾಗಿವೆ ಎಂಬ ವರದಿಗಳು ಕೇಳಿಬಂದಿದೆ.
ಗರ್ಭಿಣಿ ಎಂದು ಆಸ್ಪತ್ರೆ ಅಥವಾ ಸಾಮಾಜಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ತಿಳಿಸದೆ ಮನೆಯಲ್ಲೇ ಹೆರಿಗೆ ಮಾಡಿಸುತ್ತಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಇಂತಹ ರಹಸ್ಯ ಗುಂಪುಗಳು ಸಕ್ರಿಯವಾಗಿವೆ. ಏಪ್ರಿಲ್ 2021 ರಿಂದ ಈ ಮಾರ್ಚ್ ವರೆಗೆ ಇಲ್ಲಿಯ ಮನೆಗಳಲ್ಲಿ 273 ಹೆರಿಗೆಗಳು ನಡೆದಿವೆ ಎಂದು ವರದಿಯಾಗಿದೆ.
ಕೆಲವು ಮನೆಗಳನ್ನು ಕೇಂದ್ರೀಕರಿಸಿ ಇಂತಹ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ಈ ರೀತಿ ಹೆರಿಗೆ ನಡೆಸಿದ್ದ ತಾನೂರಿನಲ್ಲಿರುವ ಮನೆಯನ್ನು ಆರೋಗ್ಯ ಇಲಾಖೆ ಹಾಗೂ ಪೋಲೀಸರು ತಿಂಗಳ ಹಿಂದೆಯೇ ಮುಚ್ಚಿದ್ದರು. ರಾಜ್ಯದೆಲ್ಲೆಡೆಯಿಂದ ಹೆರಿಗೆಗೆಂದು ಇಲ್ಲಿಗೆ ಬಂದಿದ್ದ ಹೆಂಗಸರು ಬೇರೆಯವರಿಗೆ ತಾವು ಬಂಧುಗಳು, ಹಬ್ಬಕ್ಕೆ ಬಂದಿದ್ದೇವೆ ಎಂದು ಹೇಳುತ್ತಿದ್ದರು.
ಇನ್ನು ಕೆಲವರು ‘ಮರಿಯಂಹೂ’(ಒಂದು ಒಣ ರೀತಿಯ ಹೂವು) ಹೂವನ್ನು ಬಳಸುವುದರಿಂದ ಸುಗಮ ಪ್ರಸವವಾಗುತ್ತದೆ ಎಂಬ ನಂಬಿಕೆಯೂ ಇದೆ. ಇದನ್ನು ಗಲ್ಫ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದನ್ನು ಹಾಸಿಗೆಯ ಕೆಳಗೆ ಅಥವಾ ಗರ್ಭಿಣಿ ಮಹಿಳೆಯ ಮೆತ್ತೆ ಅಡಿಯಲ್ಲಿ ಇರಿಸಲಾಗುತ್ತದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2018ರಲ್ಲಿ ರಾಜ್ಯದಲ್ಲಿ 740 ಮನೆ ಹೆರಿಗೆಗಳು ನಡೆದಿವೆ. ಯಾವುದೇ ಹೊಸ ಅಂಕಿ ಅಂಶವನ್ನು ಬಿಡುಗಡೆ ಮಾಡಿಲ್ಲ. ಮಲಪ್ಪುರಂ 208 ವಯನಾಡ್ 135 ಇಡುಕ್ಕಿ 51 ಪಾಲಕ್ಕಾಡ್ 49 ಎರ್ನಾಕುಳಂ 25 ಕಾಸರಗೋಡು 22É ಎಂಬಂತೆ ಗೃಹ ಹೆರಿಗೆಗಳು ನಡೆದಿವೆ.
ಕಳೆದ ಕೆಲ ದಿನಗಳಿಂದ ರಾಜ್ಯದ ಮನೆಗಳಲ್ಲಿ ಸಕ್ರಿಯವಾಗಿ ಹೆರಿಗೆಯಾಗುತ್ತಿರುವುದರ ಹಿಂದಿನ ಕಾರಣಕ್ಕಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಎರಡು ವಾರಗಳ ಹಿಂದೆ ಮನೆಯಲ್ಲಿ ತಾಯಿ ಮತ್ತು ಮಗು ಸಾವನ್ನಪ್ಪಿದ್ದರು. ಹೆರಿಗೆ ನೋವು ಕಾಣಿಸಿಕೊಂಡರೂ ಪತಿ ಹಾಗೂ ಹಿರಿಯ ಮಗ ಹೆರಿಗೆ ಮಾಡಿಸಿದ್ದಾರೆ.
ತಿರೂರ್ ಸಮೀಪದ ಚೆರಿಮುಂಡ ಎಂಬಲ್ಲಿ ಮನೆಯಲ್ಲಿ 12ನೇ ಹೆರಿಗೆ ಬಳಿಕ ತಾಯಿ ಮತ್ತು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೆರಿಗೆ ಮಾಡಿಸಿದ ಮಹಿಳೆಯನ್ನು ವಿಚಾರಿಸಿದಾಗ ಆಕೆ ಹಿಂದೆಂದೂ ಹೆರಿಗೆ ಮಾಡಿಸಿಲ್ಲ ಎಂದು ಉತ್ತರಿಸಿದ್ದಾಳೆ. ಮನೆಯಲ್ಲಿ ಹೆರಿಗೆ ಮಾಡುವುದು ಸುರಕ್ಷಿತವಲ್ಲ ಎಂದು ಹೇಳಿದರೂ ಅನೇಕರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಗ್ಯ ಕಾರ್ಯಕರ್ತರು
ಗಮನಸೆಳೆದಿದ್ದಾರೆ.