ಕಾಸರಗೋಡು: ವಾರ್ಷಿಕ ಪ್ರೀಮಿಯಂ ರೂ. 299 ನಲ್ಲಿ 10 ಲಕ್ಷ ರೂ ವಿಮಾ ರಕ್ಷಣೆಯೊಂದಿಗೆ ಅಂಚೆ ಇಲಾಖೆ ಅಪಘಾತ ವಿಮೆಯನ್ನು ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಮಾಡಲಾಗುತ್ತದೆ. ಇಂಡಿಯನ್ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್‍ನಲ್ಲಿ ಖಾತೆ ಹೊಂದಿರುವವರಿಗೆ ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಎಂಬ ಹೆಸರಿನ ಈ ವಿಮೆ ಅನ್ವಯವಾಗುತ್ತದೆ.
ರೂ. 299 ಮತ್ತು ರೂ.399 ಎಂಬ ಎರಡು ವಿಧದ ವಿಮೆಗಳಿದ್ದು, 299 ರೂಪಾಯಿ ವೆಚ್ಚದ ವಿಮೆ ಹೊಂದಿರುವ ಗ್ರಾಹಕನಿಗೆ ಆಕಸ್ಮಿಕ ಸಾವು,
ಶಾಶ್ವತ ಸಂಪೂರ್ಣ ಅಂಗವೈಕಲ್ಯ, ಶಾಶ್ವತ ಭಾಗಶಃ ಅಂಗವೈಕಲ್ಯ, ಆಕಸ್ಮಿಕ ಅಂಗವೈಕಲ್ಯ ಪಾಶ್ರ್ವವಾಯುವಿಗೆ 10 ಲಕ್ಷ ರೂ. ವರೆಗೆ ವಿಮಾ ಸೌಲಭ್ಯ ಸಿಗಲಿದೆ. ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದ್ದಲ್ಲಿ60000 ಅಥವಾ ನಿಜವಾದ ಕ್ಲೈಮ್ ಯಾವುದು ಕಡಿಮೆಯೋ ಅದನ್ನು ಪಡೆಯಲು ಅರ್ಹನಾಗುತ್ತಾನೆ. ಒಳರೋಗಿ ಚಿಕಿತ್ಸೆ ಅಗತ್ಯವಿಲ್ಲದಿದ್ದರೆ 30000 ಅಥವಾ ಮೂಲ ಹಕ್ಕು ಯಾವುದು ಕಡಿಮೆಯೋ ಅದು ಲಭ್ಯವಾಗಲಿದೆ. ಇನ್ನು 399 ರೂ. ಮೊತ್ತದ ವಿಮೆಗೆ ಈ ಪ್ರಯೋಜನಗಳ ಜೊತೆಗೆ, ಪಾಲಿಸಿದಾರರ ಮಕ್ಕಳ
ಶೈಕ್ಷಣಿಕ ವೆಚ್ಚವನ್ನೂ ಭರಿಸಲಾಗುತ್ತದೆ. ಇನ್ ಹಾಸ್ಪಿಟಲ್ ಡೈಲಿ ಕ್ಯಾಶ್ ಯೋಜನೆಯನ್ವಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಲ್ಲಿ ಹತ್ತು ದಿವಸಗಳ ಕಾಲ ಪ್ರತಿ ದಿನ 1ಸಾವಿರ ರಊ. ವರೆಗೆ ಲಭ್ಯವಗಲಿದೆ.
ವಿಮೆಗೆ ಸೇರಲು ವಯಸ್ಸಿನ ಮಿತಿ 18-65 ವರ್ಷಗಳಾಗಿದ್ದು, ವಿಮಾ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಅಕ್ಟೋಬರ್ 22ರ ವರೆಗೆ ಜಿಲ್ಲೆಯ ಅಂಚೆ ಕಚೇರಿಗಳಲ್ಲಿ ವಿಶೇಷ ಮೇಳಗಳು ನಡೆಯಲಿದೆ. ಹೆಚ್ಚಿನ ಮಾಃಇತಿಗಾಗಿ ಸನಿಹದ ಅಂಚೆ ಕಛೇರಿ ಅಥವಾ ಪೆÇೀಸ್ಟ್‍ಮ್ಯಾನ್ ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
299 ರೂ. ವಾರ್ಷಿಕ ಪ್ರೀಮಿಯಂನಲ್ಲಿ 10 ಲಕ್ಷ ರೂ. ಅಪಘಾತ ವಿಮೆ-ಅಂಚೆ ಇಲಾಖೆಯಿಂದ ವಿಶೇಷ ವಿಮಾ ರಕ್ಷಣೆ
0
ಅಕ್ಟೋಬರ್ 20, 2022
Tags