ತಿರುವನಂತಪುರ: ರೈತರ ಸಬಲೀಕರಣವೇ ಪ್ರಧಾನಿ ನರೇಂದ್ರ ಮೋದಿಯವರ ನೀತಿ ಮತ್ತು ನಿಲುವು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿರುವರು.
ತಿರುವನಂತಪುರದ ವೆಳ್ಳಾಯರದಲ್ಲಿ ನಿನ್ನೆ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತಿನ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವರು ಮಾತನಾಡಿದರು.
ಯೋಜನೆಯ ಭಾಗವಾಗಿ ಇಲ್ಲಿಯವರೆಗೆ ಎರಡು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಪ್ರಯೋಜನಗಳನ್ನು ವಿತರಿಸಲಾಗಿದೆ. ಕೇರಳದಲ್ಲಿ ಸುಮಾರು 36 ಲಕ್ಷ ರೈತರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಸಚಿವರು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಆಗುತ್ತಿವೆ. ಕಿಸಾನ್ ಸಮ್ಮಾನ್ ನಿಧಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಮಾತ್ರವಲ್ಲದೆ, ದೇಶಾದ್ಯಂತ ಹತ್ತು ಸಾವಿರ ಎಫ್‍ಪಿಒಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಕೇರಳವೊಂದರಲ್ಲೇ 100ಕ್ಕೂ ಹೆಚ್ಚು ಎಫ್‍ಪಿಒಗಳು ಕಾರ್ಯನಿರ್ವಹಿಸುತ್ತಿವೆ. ದೇಶದಲಲಿ ಎಲ್ಲಿ ಬೇಕಿದ್ದರೂ ರೈತ ತನ್ನದೇ ಆದ ಮಾರುಕಟ್ಟೆಯನ್ನು ಕಂಡುಕೊಳ್ಳುವಂತೆ ಬದಲಾವಣೆಗಳು ನಡೆದಿವೆ. ಕೃಷಿ ರಫ್ತಿನಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ.
ಅಗ್ರಿ ಸ್ಟಾರ್ಟಪ್‍ಗಳು ದೊಡ್ಡ ಕ್ರಾಂತಿಯಾಗಿ ಮಾರ್ಪಟ್ಟಿವೆ. ರೈತರ ಸಂಪತ್ತು ಹೆಚ್ಚಿಸಲು ಕೇಂದ್ರದ ಎಲ್ಲ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು. ಇದೇ ವೇಳೆ, ಕಿಸಾನ್ ಸಮ್ಮಾನ್ ನಿಧಿ ವಿತರಣೆಯ ಜೊತೆಗೆ ಕೇಂದ್ರ ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ 600 'ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ' ಕೇಂದ್ರಗಳು ಮತ್ತು 'ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರ್ಯಾಯ'- ಒಂದು ರಾಷ್ಟ್ರ ಒಂದು ರಸಗೊಬ್ಬರ ಯೋಜನೆಗೆ ಪ್ರಧಾನ ಮಂತ್ರಿ ಉದ್ಘಾಟಿಸಿದರು. ನರೇಂದ್ರ ಮೋದಿ ಅವರು ಭಾರತ್ ಯೂರಿಯಾ ಚೀಲಗಳನ್ನು ಬಿಡುಗಡೆ ಮಾಡಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ; ಕೇರಳದಲ್ಲಿ ಸುಮಾರು 36 ಲಕ್ಷ ರೈತರು ಫಲಾನುಭವಿಗಳು: ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ನೀತಿ: ವಿ.ಮುರಳೀಧರನ್
0
ಅಕ್ಟೋಬರ್ 17, 2022