ಎರ್ನಾಕುಳಂ: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗಿಲ್ಲ. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಾರದೆ ಸ್ಥಿರತೆ ಮುಂದುವರಿದಿದೆ.
ನಾಲ್ಕು ದಿನಗಳಿಂದ 38,280 ರೂ.ನಲ್ಲಿ ವಹಿವಾಟು ನಡೆಯುತ್ತಿದೆ.
ಇದೇ ತಿಂಗಳ 6ರಂದು ಚಿನ್ನದ ಬೆಲೆಯಲ್ಲಿ ಕೊನೆಯ ಬಾರಿಗೆ ಬದಲಾವಣೆ ನಡೆದಿತ್ತು. ಅಂದು ಚಿನ್ನ 80 ರೂ.ಹೆಚ್ಚಳಗೊಂಡಿತ್ತು. ಬಳಿಕ ಒಂದು ಗ್ರಾಂ ಚಿನ್ನದ ಬೆಲೆ 4785 ಆಗಿತ್ತು. ಇದು ಈ ತಿಂಗಳ ಗರಿಷ್ಠ ದರವಾಗಿದೆ. ಈ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆ 37,200 ರೂ. ಗಳಿಷ್ಟಿತ್ತು. ನಂತರದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಕುಸಿಯಿತು. ಇದಾದ ಬಳಿಕ ಬೆಲೆ ಏರಿಕೆಯಾಗಿದೆ.
ಕಳೆದ ತಿಂಗಳು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು. ಓಣಂ ಸೀಸನ್ ಆಗಿದ್ದರಿಂದ ಚಿನ್ನದ ಬೆಲೆ ಕುಸಿದಿರುವುದು ವರ್ತಕರಲ್ಲಿ ಆತಂಕ ಮೂಡಿಸಿತ್ತು. ಆದರೆ ಚಿನ್ನದ ಅಂಗಡಿಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಇದೇ ವೇಳೆ ಚಿನ್ನ ಖರೀದಿಸಲು ಬರುವವರ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಹೆದರಿ ಜನರು ಹೆಚ್ಚು ಚಿನ್ನ ಖರೀದಿಸುತ್ತಿದ್ದಾರೆ ಎನ್ನಲಾಗಿದೆ.
ಚಿನ್ನದ ಬೆಲೆಯಲ್ಲಿ ಈ ತಿಂಗಳ ಅತ್ಯಧಿಕ ದರ ಏರಿಕೆ: ಪವನ್ ಗೆ 38,000 ದಾಟಿದ ಮೌಲ್ಯ
0
ಅಕ್ಟೋಬರ್ 09, 2022