ತಿರುವನಂತಪುರ: ಕೆಎಸ್‍ಆರ್‍ಟಿಸಿ ನೌಕರರ ವಿರುದ್ಧ ಕೆಎಸ್‍ಆರ್‍ಟಿಸಿ ಆಡಳಿತ ಮಂಡಳಿಗೆ ಬಂದಿರುವ ದೂರುಗಳ ವರದಿ ಹೊರಬಿದ್ದಿದೆ.
ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮಹಿಳಾ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆಗಳ ನಡುವೆಯೇ ವರದಿ ಹೊರಬಿದ್ದಿದೆ. ಒಂದು ತಿಂಗಳಲ್ಲಿ ನೌಕರರ ಬಗ್ಗೆ 400 ಕ್ಕೂ ಹೆಚ್ಚು ದೂರುಗಳನ್ನು ಆಡಳಿತ ಮಂಡಳಿಗೆ ಬಂದಿದೆ ಎಂದು ವರದಿಯಾಗಿದೆ. ಇದನ್ನು ಆಧರಿಸಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಒಂದು ತಿಂಗಳಲ್ಲಿ ದೂರುಗಳ ಆಧಾರದ ಮೇಲೆ ಸುಮಾರು 50 ಉದ್ಯೋಗಿಗಳನ್ನು ಆಡಳಿತ ಮಂಡಳಿಯು ಅಮಾನತುಗೊಳಿಸಿದೆ. ದೂರುಗಳು ಗಂಭೀರವಾಗಿರದಿದ್ದರೆ ಡಿಪೆÇೀ ಮಟ್ಟದಲ್ಲಿ ನೌಕರರಿಗೆ ಎಚ್ಚರಿಕೆ ನೀಡಲಾಗುತ್ತದೆ. ಒಂದೇ ದಿನದಲ್ಲಿ ರಾಜ್ಯದ ವಿವಿಧ ಡಿಪೆÇೀಗಳಲ್ಲಿ ನೌಕರರ ಬಗ್ಗೆ ಹಲವು ದೂರುಗಳು ಬಂದಿವೆ. ಕಂಟ್ರೋಲ್ ರೂಂ ಹಾಗೂ ಠಾಣಾಧಿಕಾರಿ ಕಚೇರಿಯಲ್ಲೂ ದೂರುಗಳ ಸಂಖ್ಯೆ ಹೆಚ್ಚಿದೆ. ವರದಿಯ ಪ್ರಕಾರ, ಸಿಬ್ಬಂದಿಯಿಂದ ಕೆಟ್ಟ ಅನುಭವವನ್ನು ಎದುರಿಸುತ್ತಿರುವ 80 ಪ್ರತಿಶತ ಪ್ರಯಾಣಿಕರು ಲಿಖಿತ ದೂರುಗಳನ್ನು ನೀಡುತ್ತಾರೆ.
ಕೆಲಸದ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದಿರುವುದು ಇಂತಹ ಅಸ|ಭ್ಯ ವರ್ತನೆಗೆ ಕಾರಣವೆಂದು ಅಧ್ಯಯನ ವರದಿಯೊಂದು ತಿಳಿಸಿದೆ. ಇದಲ್ಲದೇ, ಸಂಬಳದ ಬಿಕ್ಕಟ್ಟು ಮತ್ತು ನಂತರದ ಮಾನಸಿಕ ಒತ್ತಡ ಇಂತಹ ನಡವಳಿಕೆಗಳಿಗೆ ಕಾರಣ ಎಂದು ವರದಿ ವಿವರಿಸುತ್ತದೆ.
ಮುಗಿಯದ ಕೆ.ಎಸ್.ಆರ್.ಟಿ.ಸಿ.ಸಮಸ್ಯೆ: ನೌಕರರ ವಿರುದ್ದ ನಿರಂತರ ದೂರುಗಳು: ತಿಂಗಳಿಗೆ 400 ಕ್ಕೂ ಹೆಚ್ಚು ದೂರುಗಳು
0
ಅಕ್ಟೋಬರ್ 03, 2022
Tags