ತಿರುವನಂತಪುರಂ: ಕೃಷಿ ಭೂಮಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಕಾಡು ಹಂದಿಗಳಿಂದ ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ರೈತರು ಒಂದಿಲ್ಲೊಂದು ಉಪಾಯ ಹೂಡುತ್ತಿರುತ್ತಾರೆ. ಇದೀಗ ಕೇರಳದ ಕಣಿಯಂ ಪೊಯಿಲೂರು ಭಾಗದ ರೈತರಿಗೆ ಸಮಸ್ಯೆಯಾಗಿದ್ದ ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಈ ಘಟನೆ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ. ಈ ಭಾಗದಲ್ಲಿ ಕಾಡು ಹಂದಿಗಳ ಉಪಟಳ
ಹೆಚ್ಚಾಗಿದ್ದು, ರೈತರ ಅಪಾರ ಪ್ರಮಾಣದ ಕೃಷಿ ಭೂಮಿ ಹಾಳಾಗುತ್ತಿತ್ತು. ಈ ಬಗ್ಗೆ ರೈತರು
ಕಾಡು ಹಂದಿಗಳ ಸಮಸ್ಯೆ ಬಗೆ ಹರಿಸುವಂತೆ ನಗರಸಭೆಗೆ ದೂರು ನೀಡಿದ್ದರು.
ರೈತರ
ಮನವಿಗೆ ಸ್ಪಂದಿಸಿದ ನಗರಸಭೆ 8 ಜನ ಶೂಟರ್ ಹಾಗೂ 2 ಜನ ಸಹಾಯಕರನ್ನು ಒಳಗೊಂಡ ವಿಶೇಷ ತಂಡ
ರಚಿಸಿದೆ. ನಂತರ ನಡೆದ 12 ಗಂಟೆಗಳ ಕಾರ್ಯಾಚರಣೆಯಲ್ಲಿ 42 ಕಾಡು ಹಂದಿಗಳಿಗೆ
ಗುಂಡಿಕ್ಕಲಾಗಿದೆ. ಅರಣ್ಯ ಇಲಾಖೆಯ ಅನುಮತಿ ಪಡೆದು, ಪರವಾನಗಿ ಇರುವ ಬಂದೂಕು ಬಳಸಿ ಈ
ಕಾರ್ಯಾಚರಣೆ ಮಾಡಲಾಗಿದೆ ಎಂದು ವರದಿಯಾಗಿದೆ.