ತಿರುವನಂತಪುರ: ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಿದ ರಾಜ್ಯ ಸರ್ಕಾರದ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.
ಲೋಕಾಯುಕ್ತರು ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮತ್ತು ಕೆಎಂಎಸ್‍ಸಿಎಲ್ ಜನರಲ್ ಮ್ಯಾನೇಜರ್ ದಿಲೀಪ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ರಕ್ಷಣಾ ಉಪಕರಣಗಳ ಖರೀದಿಯಲ್ಲಿ ಭಾರಿ ಭ್ರμÁ್ಟಚಾರ ನಡೆದಿದೆ ಎಂಬ ಆರೋಪ ಸರ್ಕಾರದ ಮೇಲಿದೆ. ಒಂದು ತಿಂಗಳೊಳಗೆ ನೋಟಿಸ್‍ಗೆ ಉತ್ತರ ನೀಡುವಂತೆ ಲೋಕಾಯುಕ್ತರು ತಾಕೀತು ಮಾಡಿದ್ದಾರೆ.
ಪಿಪಿಇ ಕಿಟ್ ಖರೀದಿಗೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿದೆ. ಕೊರೋನಾ ಅವಧಿಯಲ್ಲಿ, ಕೇರಳದ ಕಂಪನಿಗಳನ್ನು ತಪ್ಪಿಸಿ ಮಹಾರಾಷ್ಟ್ರ ಮೂಲದ ಸನ್ಫಾರ್ಮಾ ಎಂಬ ಕಂಪನಿಯಿಂದ ಸರ್ಕಾರವು ಪಿಪಿಇ ಕಿಟ್ ಅನ್ನು ಖರೀದಿಸಿತ್ತು. ಕೇರಳದ ಕಂಪನಿಗಳು ಸರ್ಕಾರಕ್ಕೆ 500 ರೂಪಾಯಿ ದರದಲ್ಲಿ ಪಿಪಿಇ ಕಿಟ್‍ಗಳನ್ನು ನೀಡಲು ಸಿದ್ಧವಾಗಿದ್ದವು. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಸರ್ಕಾರ 1550 ರೂ.ನಂತೆ ಖರೀದಿಸುತ್ತಿತ್ತು.
ನಂತರ ಸನ್ಫಾರ್ಮಾ ವಂಚನೆ ನಡೆಸಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಸರ್ಕಾರದ ಪಿಪಿಇ ಕಿಟ್ ಲೂಟಿ ಹೊರಬಿದ್ದಿದೆ. ಈ ಘಟನೆ ಆಗ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಪಿಪಿಇ ಕಿಟ್‍ನಂತೆಯೇ, ಸರ್ಕಾರವು ಇತರ ರಕ್ಷಣಾ ಸಾಧನಗಳನ್ನು ಸಹ ಭಾರಿ ವೆಚ್ಚದಲ್ಲಿ ಖರೀದಿಸಿತ್ತು.
500 ರೂ.ವಿನ ಪಿ.ಪಿ.ಇ.ಕಿಟ್ 1550 ರೂ.ಗೆ ಖರೀದಿಸಿದ ಪ್ರಕರಣ: ಕೊರೋನಾ ಸಂದರ್ಭ ಸರ್ಕಾರದ ಲೂಟಿ ವಿರುದ್ಧ ತನಿಖೆಗೆ ಲೋಕಾಯುಕ್ತ ಆದೇಶ
0
ಅಕ್ಟೋಬರ್ 14, 2022