ಪತ್ತನಂತಿಟ್ಟ: ಇಳಂತೂರು ಅವಳಿ ಕೊಲೆ ಪ್ರಕರಣದ ಡಿಎನ್‍ಎ ಪರೀಕ್ಷೆಯ ಫಲಿತಾಂಶ ವಿಳಂಬವಾಗುವುದಾಗಿ ಪೋಲೀಸರು ತಿಳಿಸಿದ್ದಾರೆ. ಆರೋಪಿಗಳು ಪದ್ಮಾಳ ದೇಹಗಳನ್ನು 56 ಭಾಗಗಳಾಗಿ ಕತ್ತರಿಸಿರುವುದರಿಂದ ಹೆಚ್ಚಿನ ಪರಿಶೀಲನೆ ಅಗತ್ಯವಿದೆ ಎನ್ನಲಾಗಿದೆ.
ಪ್ರತಿಯೊಂದರ ಡಿಎನ್‍ಎ ಪರೀಕ್ಷೆಯನ್ನು ಪ್ರತ್ಯೇಕವಾಗಿ ಪೂರ್ಣಗೊಳಿಸಬೇಕಾಗಿದೆ ಎಂದು ಕೊಚ್ಚಿ ನಗರ ಪೋಲೀಸ್ ಡಿಸಿಪಿಎಸ್ ಶಶಿಧರನ್ ಮಾಹಿತಿ ನೀಡಿರುವರು. ನವೆಂಬರ್ 28 ರಂದು ತಿರುವನಂತಪುರಂ ಪೋರೆನ್ಸಿಕ್ ಸೈನ್ಸ್ ಲ್ಯಾಬ್‍ನಿಂದ ಸಂಪೂರ್ಣ ಡಿಎನ್‍ಎ ಫಲಿತಾಂಶ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದರು. ಪದ್ಮಾ ಅವರ ಮೃತದೇಹ ಬಿಡುಗಡೆ ವಿಳಂಬದ ವಿರುದ್ಧ ಕುಟುಂಬಸ್ಥರು ಪ್ರತಿಭಟನೆಗೆ ಮುಂದಾಗಿದ್ದರು. ಅವರಿಗೆ ಮನವರಿಕೆ ಮಾಡಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳು ಇದ್ದಾರೆಯೇ ಎಂದು ಹೇಳಲು ಸಾಧ್ಯವಿಲ್ಲ, 90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಪದ್ಮಾ ಅವರ ಪುತ್ರ ಸೆಲ್ವರಾಜ್ ಅವರು ಪಿಣರಾಯಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದಿಂದ ಅವರಿಗೆ ಯಾವುದೇ ನೆರವು ಸಿಗುತ್ತಿಲ್ಲ. ಸೆಲ್ವರಾಜ್ ಅವರು ತಮಿಳುನಾಡಿನಿಂದ ಕೇರಳಕ್ಕೆ ಬಂದು ನರಳಾಡುತ್ತಿದ್ದಾರೆ. ತಾಯಿ ತೀರಿಕೊಂಡ ನಂತರ ಕೇರಳ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಅಮ್ಮನ ಹಂತಕರು ಮತ್ತೆ ಹೊರಗೆ ಬಂದರೆ ಅಂತಹ ಅಪರಾಧಗಳನ್ನು ಮಾಡುವುದು ಖಚಿತ ಎಂದು ಸೆಲ್ವರಾಜ್ ಹೇಳಿದ್ದಾರೆ.
ಜನ್ಮ ನೀಡಿದ ತಾಯಿಯ ಅಂತಿಮ ಸಂಸ್ಕಾರ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಇಲ್ಲಿ ತಂಗಲು ಈಗಾಗಲೇ ಅರವತ್ತು ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗಿದೆ. ಪ್ರಕರಣದ ಹಿಂದೆ ಹೋಗಿ ಕೆಲಸವನ್ನೂ ಕಳೆದುಕೊಂಡಿದ್ದಾರೆ. ಮೊಕದ್ದಮೆ ಹೂಡಲು ವಕೀಲರಿಗೆ ದೊಡ್ಡ ಮೊತ್ತದ ಹಣ ಕೊಡುವಷ್ಟು ಆರ್ಥಿಕ ಸಾಮಥ್ರ್ಯ ಅವರಿಗಿಲ್ಲ. ಇದುವರೆಗೆ ಸರಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ತಮಿಳುನಾಡಿನಿಂದ ಬಂದು ಕೇರಳದಲ್ಲಿ ನರಳಾಡುತ್ತಿದ್ದೇನೆ ಎಂದೂ ಯುವಕ ಹೇಳಿದ್ದಾನೆ.
56 ತುಣುಕುಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಬೇಕಿದೆ: ಪದ್ಮಾ ಅವರ ಡಿಎನ್‍ಎ ಪರೀಕ್ಷೆಯ ಫಲಿತಾಂಶ ತಡವಾಗಲಿದೆ: ಪೋಲೀಸರಿಂದ ಹೇಳಿಕೆ
0
ಅಕ್ಟೋಬರ್ 31, 2022