ತಿರುವನಂತಪುರ: ಅದಾನಿ ವಿಝಿಂಜಂ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಆರು ವರ್ಷಗಳ ಅವಧಿಯಲ್ಲಿ ಕಾಪೆರ್Çರೇಟ್ ಜವಾಬ್ದಾರಿ ನಿಧಿಯಿಂದ (ಸಿಎಸ್‍ಆರ್) 59.5 ಕೋಟಿ ರೂ. ವಿನಿಯೋಗಿಸಿದೆ.
ಅತಿ ಹೆಚ್ಚು ಮೊತ್ತವನ್ನು ಪ್ರವಾಹದ ಸಂದರ್ಭದಲ್ಲಿ ನಡೆಸಿದ ಚಟುವಟಿಕೆಗಳಿಗೆ (25 ಕೋಟಿ) ಮತ್ತು ಯೋಜನಾ ಪ್ರದೇಶದ ವಾರ್ಡ್‍ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ (10.92 ಕೋಟಿ) ಖರ್ಚು ಮಾಡಲಾಗಿದೆ. ಶಿಕ್ಷಣ ಚಟುವಟಿಕೆಗಳು (1.64 ಕೋಟಿ), ಸಾಮಾಜಿಕ ಆರೋಗ್ಯ (3.57 ಕೋಟಿ), ಕೌಶಲ್ಯಾಭಿವೃದ್ಧಿ, ಜೀವನೋಪಾಯ, ಕ್ರೀಡೆ (4.6 ಕೋಟಿ), ವಿಶೇಷ ಯೋಜನೆಗಳು (6.34 ಕೋಟಿ), ಓಖಿ ಪರಿಹಾರ (2.5 ಕೋಟಿ), ಮತ್ತು ಕೋವಿಡ್ ಪರಿಹಾರ (2.5 ಕೋಟಿ) ಇತರ ಚಟುವಟಿಕೆಗಳಿಗೆ (5 ಕೋಟಿ) ಮೀಸಲಿಡಲಾಗಿದೆ. ಅದಾನಿ ಗ್ರೂಪ್ ವಿಝಿಂಜಂ ಬಂದರಿಗೆ ಇದುವರೆಗೆ 4000 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಿದೆ.
ಬಂದರು ನಿರ್ಮಾಣ ಸ್ಥಗಿತದಿಂದ ಆರಂಭಿಕ ನಷ್ಟವು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು, ಈ ಮಧ್ಯೆ, ಅದಾನಿ ವಿಝಿಂಜಮ್ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕೈಗೊಂಡಿರುವ ಸಿಎಸ್ಆರ್ ಚಟುವಟಿಕೆಗಳನ್ನು ಮುಂದುವರಿಸಲು ನಿರ್ಧರಿಸಿದೆ. ಅದಾನಿ ಗ್ರೂಪ್ ಇತ್ತೀಚೆಗೆ ತ್ಯಾಜ್ಯ ವಿಲೇವಾರಿಗಾಗಿ ವಸ್ತು ಚೇತರಿಕೆ ಕೇಂದ್ರಕ್ಕಾಗಿ 50 ಲಕ್ಷ ರೂಪಾಯಿಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ.
ವಿಝಿಂಜಂ ಬಂದರಿನ ನಿರ್ಮಾಣದಲ್ಲಿ 435 ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ
ಕೌಶಲ್ಯ ಅಭಿವೃದ್ಧಿಗಾಗಿ ಸಮುದಾಯ ಕೌಶಲ್ಯ ಪಾರ್ಕ್, ಶಿಕ್ಷಣ ಗಳಿಗೆ 282 ವಿದ್ಯಾರ್ಥಿಗಳಿಗೆ 20000 ರೂಪಾಯಿ ವಿದ್ಯಾರ್ಥಿವೇತನ
ನೀಡಲಾಗಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ 249 ವಿದ್ಯಾರ್ಥಿಗಳಿಗೆ ನೆರವು
645 ವಿದ್ಯಾರ್ಥಿಗಳಿಗೆ ಸಂಜೆ ತರಗತಿ
500 ವಿದ್ಯಾರ್ಥಿಗಳಿಗೆ ಇಂಗ್ಲಿμï ತರಗತಿ
14 ಶಾಲೆಗಳಿಗೆ ಸ್ಮಾರ್ಟ್ ತರಗತಿ
49 ಅಂಗನವಾಡಿಗಳಿಗೆ ನೀರು ಶುದ್ಧೀಕರಣ ಯಂತ್ರ
ಆರೋಗ್ಯ
151 ಕ್ಯಾನ್ಸರ್ ರೋಗಿಗಳಿಗೆ ವೈದ್ಯಕೀಯ ನೆರವು
ಮೊಬೈಲ್ ಆರೋಗ್ಯ ರಕ್ಷಣಾ ಘಟಕ
ವಿಝಿಂಜಂ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ ಕಟ್ಟಡ ಮತ್ತು 100 ಹಾಸಿಗೆಗಳು
ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ
7415 ಜನರಿಗೆ ಡಿಜಿಟಲ್ ಸಾಕ್ಷರತಾ ತರಗತಿ
ಲಾಜಿಸ್ಟಿಕ್ಸ್ ಸೆಂಟರ್, ಆಸ್ಪತ್ರೆಗಳು ಮತ್ತು ಸೂಪರ್ ಮಾರ್ಕೆಟ್‍ಗಳಲ್ಲಿ 1047 ಜನರಿಗೆ ನೇಮಕಾತಿ.
ಕೃಷಿ ಶಾಲೆ ಆರಂಭಿಸಿ 400 ಸ್ಥಳೀಯರಿಗೆ ತರಬೇತಿ
760 ಮನೆಗಳಲ್ಲಿ ಸಾವಯವ ತರಕಾರಿ ಕೃಷಿ
610 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತರಬೇತಿ
ಫುಟ್ಬಾಲ್ ತರಬೇತಿ
ಮೂಲಸೌಕರ್ಯ
ಹಾರ್ಬರ್ ಏರಿಯಾದ ಎಲ್‍ಪಿ ಶಾಲೆ ಮತ್ತು ಮುಳ್ಳೂರು ಯುಪಿ ಶಾಲೆಗೆ ಹೊಸ ಕಟ್ಟಡಗಳು
ಕೊಟ್ಟಪುರಂ, ವಿಝಿಂಜಂ ಮತ್ತು ಬಂದರಿನಲ್ಲಿ ಸಾರ್ವಜನಿಕ ಶೌಚಾಲಯ
ಕೊಟ್ಟಾಪುರಂ ಶಾಲೆಯಲ್ಲಿ ಆಟದ ಮೈದಾನ
ವಿಝಿಂಜಂ ಆಜಾದ್ ಸ್ಮಾರಕ ಗ್ರಂಥಾಲಯದ ನವೀಕರಣ
ತ್ಯಾಜ್ಯ ವಿಲೇವಾರಿಗೆ ವಿವಿಧ ವಾರ್ಡ್‍ಗಳಲ್ಲಿ ಕಸದ ತೊಟ್ಟಿಗಳು
ಗಂಗ್ಯಾರ್ ದಡ ಶುಚಿಗೊಳಿಸುವಿಕೆ ಮೊದಲಾದವುಗಳು ನಡೆದಿವೆ.
59.5 ಕೋಟಿ ಸಿ.ಎಸ.ಆರ್ ಫಂಡ್ ನಿಂದ ನೆರವು: ಸ್ಥಳೀಯ ನಿವಾಸಿಗಳಿಗೆ 435 ಉದ್ಯೋಗಗಳು: ತೀವ್ರ ಪ್ರತಿಭಟನೆ ಮಧ್ಯೆ ಅದಾನಿ ವಿಝಿಂಜಂ ನಿವಾಸಿಗಳಿಗೆ ಸಹಾಯ ಮಾಡಿದ ಲೆಕ್ಕಾಚಾರ ಬಿಡುಗಡೆ
0
ಅಕ್ಟೋಬರ್ 21, 2022