HEALTH TIPS

5ಜಿಯಿಂದ ಶಿಕ್ಷಣ ಕ್ಷೇತ್ರ ಉನ್ನತ ಮಟ್ಟಕ್ಕೆ ಹೋಗಲಿದೆ: ನರೇಂದ್ರ ಮೋದಿ

 

                 ಅಡಾಲಜ್ : 5ಜಿ ಟೆಲಿಕಾಂ ಸೇವೆಯು ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲಿದೆ. ಹಾಗೆಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ದೇಶವನ್ನು ಇಂಗ್ಲಿಷ್ ಗುಲಾಮಗಿರಿಯ ಮನಸ್ಥಿತಿಯಿಂದ ಹೊರತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

                    ಗಾಂಧಿನಗರ ಜಿಲ್ಲೆಯ ಅಡಾಲಜ್‌ ಪಟ್ಟಣದಲ್ಲಿ ಗುಜರಾತ್‌ ರಾಜ್ಯ ಸರ್ಕಾರದ 'ಮಿಷನ್‌ ಸ್ಕೂಲ್ಸ್‌ ಆಫ್‌ ಎಕ್ಸಲೆನ್ಸ್‌ ಇನಿಶಿಯೇಟಿವ್‌' ಮಿಷನ್‌ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

                'ಈ ಮೊದಲು ಇಂಗ್ಲಿಷ್ ಭಾಷೆಯನ್ನು ಬೌದ್ಧಿಕ ಜ್ಞಾನದ ಮಾನದಂಡವಾಗಿ ಪರಿಗಣಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಅದು ಕೇವಲ ಸಂವಹನದ ಭಾಷಾ ಮಾಧ್ಯಮವಷ್ಟೇ. ಈ ಭಾಷೆಯ ತಡೆಗೋಡೆಯಿಂದ ಹಳ್ಳಿಗಳ ಅನೇಕ ಯುವ ಪ್ರತಿಭೆಗಳು ವೈದ್ಯರು ಮತ್ತು ಎಂಜಿನಿಯರ್ ಆಗಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರಿಗೆ ವೈದ್ಯಕೀಯ, ಎಂಜಿನಿಯರಿಂಗ್‌ ಶಿಕ್ಷಣ ಪಡೆಯಲು ಪರ್ಯಾಯ ಮಾಧ್ಯಮದ ಆಯ್ಕೆಗೆ ಅವಕಾಶವೇ ಇರಲಿಲ್ಲ. ಆದರೆ, ಹೊಸ ಶಿಕ್ಷಣ ನೀತಿಯಿಂದ ಈ ಕೊರತೆಯನ್ನು ನಾವು ನೀಗಿಸುತ್ತಿದ್ದೇವೆ' ಎಂದು ಮೋದಿ ಹೇಳಿದರು.

                  ದೇಶದಲ್ಲಿ ಇತ್ತೀಚೆಗೆ ಆರಂಭಿಸಿದ 5ಜಿ ಸೇವೆಯು ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿ ಕೊಠಡಿಗಳು ಮತ್ತು ಸ್ಮಾರ್ಟ್ ಬೋಧನೆಗಳನ್ನು ಮೀರಿದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮೇಲ್ಮಟ್ಟಕ್ಕೆ ತಲುಪಿಸಲಿದೆ. ವಿದ್ಯಾರ್ಥಿಗಳು ಈಗ 5ಜಿ ನೆರವಿನಿಂದ ತಮ್ಮ ಶಾಲೆಗಳಲ್ಲಿ ವರ್ಚುವಲ್‌ ರಿಯಾಲಿಟಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಬಹುದು ಎಂದು ಅವರು ಹೇಳಿದರು.

                '5ಜಿ ತಂತ್ರಜ್ಞಾನ ಬಳಸಿಕೊಂಡು, ಶಿಕ್ಷಕರು ಆನ್‌ಲೈನ್ ಮೂಲಕ ಹಳ್ಳಿಗಳ ಹಲವು ಶಾಲೆಗಳಿಗೆ ನೈಜ-ಸಮಯದ ಶಿಕ್ಷಣ ನೀಡಬಹುದು. ಇದರಿಂದ ಉತ್ತಮ ಶಿಕ್ಷಣ ಮತ್ತು ವಿಷಯವು ಎಲ್ಲರನ್ನೂ ತಲುಪುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ' ಎಂದರು.

              'ಮಿಷನ್‌ ಸ್ಕೂಲ್ಸ್‌ ಆಫ್‌ ಎಕ್ಸಲೆನ್ಸ್‌ ಇನಿಶಿಯೇಟಿವ್‌' ಮಿಷನ್‌ ಅಡಿ ವಿದ್ಯಾರ್ಥಿಗಳನ್ನು ಚಿಕ್ಕ ವಯಸ್ಸಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸಲಾಗುತ್ತದೆ. ಕಲೆ ಮತ್ತು ರೊಬೊಟಿಕ್ಸ್‌ನಂತಹ ಇತರ ವಿಷಯಗಳ ಬಗ್ಗೆಯೂ ಅರಿವು ಪಡೆಯಲಿದ್ದಾರೆ ಎಂದು ಮೋದಿ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries