ತಿರುವನಂತಪುರ: ರಾಜ್ಯದ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಪಿಂಚಣಿ ವಯಸ್ಸನ್ನು ಏಕೀಕರಿಸಲಾಗಿದೆ. ಪಿಂಚಣಿ ವಯಸ್ಸನ್ನು 60ಕ್ಕೆ ಏರಿಸಿ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ.
ಈ ಆದೇಶವು 122 ಪಿ.ಎಸ್.ಯು ಗಳು ಮತ್ತು 6 ಹಣಕಾಸು ನಿಗಮಗಳಿಗೆ ಅನ್ವಯಿಸುತ್ತದೆ. ಆದರೆ ಅಸ್ತಿತ್ವದಲ್ಲಿರುವ ನಿವೃತ್ತಿ ವೇತನದಾರರಿಗೆ ಅನ್ವಯಿಸುವುದಿಲ್ಲ.
ಆದರೆ ಕೆ.ಎಸ್.ಆರ್.ಟಿ.ಸಿ, ಕೆ.ಎಸ್.ಇ.ಬಿ. ಮತ್ತು ಜಲ ಪ್ರಾಧಿಕಾರದಲ್ಲಿ ಸದ್ಯಕ್ಕೆ ಈ ವಯೋಮಿತಿ ವಿಧಿಸಲಾಗುವುದಿಲ್ಲ. ಈ ಸಂಸ್ಥೆಗಳಲ್ಲಿ ಅವಲೋಕನ ನಡೆಸಿ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
2017 ರಲ್ಲಿ ರಚಿಸಲಾದ ತಜ್ಞರ ಸಮಿತಿಯಾದ ಆರ್.ಐ.ಎ.ಬಿ(ಸಾರ್ವಜನಿಕ ವಲಯದ ಪುನರ್ರಚನೆ ಮತ್ತು ಆಂತರಿಕ ಲೆಕ್ಕಪರಿಶೋಧನಾ ಮಂಡಳಿ) ವರದಿಯನ್ನು ಏಪ್ರಿಲ್ 22 ರಂದು ಕ್ಯಾಬಿನೆಟ್ ಸಭೆ ಪರಿಗಣಿಸಿದೆ. ಇದರ ಬೆನ್ನಲ್ಲೇ ಆದೇಶ ಹೊರಬಿದ್ದಿದೆ.
ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸುವುದರೊಂದಿಗೆ ಸಂಸ್ಥೆಯ ಅರ್ಹತೆಯನ್ನು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ವೇತನ ಮತ್ತು ವೇತನ ಪರಿಷ್ಕರಣೆಗೆ ಆಧಾರವಾಗಿ ಬಳಸಿಕೊಳ್ಳಲಾಗುವುದು ಎಂದು ವರದಿಯಾಗಿದೆ. ಸಂಸ್ಥೆಗಳನ್ನು ಎ, ಬಿ, ಸಿ ಮತ್ತು ಡಿ ಎಂದು ವರ್ಗೀಕರಿಸಲಾಗುವುದು.
ಸಾರ್ವಜನಿಕ ವಲಯ ಸಂಸ್ಥೆಗಳ ಪಿಂಚಣಿ ವಯಸ್ಸು 60: ಹಣಕಾಸು ಇಲಾಖೆಯಿಂದ ಆದೇಶ
0
ಅಕ್ಟೋಬರ್ 31, 2022