ತಿರುವನಂತಪುರ: ರಾಜ್ಯದಲ್ಲಿ ಕಾನೂನು ಉಲ್ಲಂಘಿಸಿದ ಬಸ್‍ಗಳನ್ನು ಹಿಡಿಯಲು ಮೋಟಾರು ವಾಹನ ಇಲಾಖೆ ನಡೆಸಿದ ಆಪರೇಷನ್ ಫೆÇೀಕಸ್ 3 ವಿಶೇಷ ಡ್ರೈವ್‍ನ ಮೊದಲ ದಿನವೇ ಭಾರೀ ಕುಳಗಳು ಬಲೆಗೆ ಬಿದ್ದಿವೆ.
ಈವರೆಗೆ ರಾಜ್ಯದ ವಿವಿಧೆಡೆ 63 ಪ್ರಕರಣಗಳು ದಾಖಲಾಗಿವೆ. 87,000 ದಂಡವನ್ನೂ ವಿಧಿಸಲಾಗಿದೆ.
ರಾಜ್ಯದ ಬಹುತೇಕ ಟೂರಿಸ್ಟ್ ಬಸ್‍ಗಳು ಕಾನೂನು ಉಲ್ಲಂಘನೆ ಮಾಡುತ್ತಿವೆ ಎಂದು ಮೋಟಾರು ವಾಹನ ಇಲಾಖೆ ಹೇಳಿಕೆ ನೀಡಿದೆ. ಬಹುತೇಕ ಬಸ್‍ಗಳಲ್ಲಿ ಅನಧಿಕೃತ ಆಕಾರ ಬದಲಾವಣೆ, ಸ್ಪೀಡ್ ಗವರ್ನರ್ ಟ್ಯಾಂಪರಿಂಗ್, ಅನಧಿಕೃತವಾಗಿ ಹಾರ್ನ್, ಲೈಟ್, ಮ್ಯೂಸಿಕ್ ಸಿಸ್ಟಂ ಅಳವಡಿಸಿರುವುದು ಕಂಡು ಬಂದಿದೆ. . ಮೊದಲ ಬಾರಿಗೆ ಕಾನೂನು ಉಲ್ಲಂಘಿಸಿ ಸಿಕ್ಕಿಬಿದ್ದ ವಾಹನಗಳು ದಂಡವನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಕೋಝಿಕ್ಕೋಡ್ ತಾಮರಸ್ಸೆರಿ, ತಿರುವನಂತಪುರ ಮ್ಯೂಸಿಯಂ ಜಂಕ್ಷನ್, ಕೊಚ್ಚಿ, ತ್ರಿಶೂರ್ ಮತ್ತು ಇಡುಕ್ಕಿ ಸೇರಿದಂತೆ ರಾಜ್ಯದ ವಿವಿಧೆಡೆ ತಪಾಸಣೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ತಪಾಸಣೆ ಮುಂದುವರಿಯಲಿದೆ. ಟೂರಿಸ್ಟ್ ಬಸ್‍ಗಳಲ್ಲಿನ ಸ್ಪೀಡ್ ಗವರ್ನರ್‍ಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಲಾಗುವುದು ಮತ್ತು ರಾತ್ರಿ ತಪಾಸಣೆಯನ್ನು ಸಹ ಬಿಗಿಗೊಳಿಸಲಾಗುವುದು. ವಡಕಂಚೇರಿ ಅಪಘಾತದ ಹಿನ್ನೆಲೆಯಲ್ಲಿ ಕಳೆದ ದಿನವೊಂದರಲ್ಲೇ 134 ಬಸ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇಲಾಖೆಯಿಂದ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹೈಕೋರ್ಟ್ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ಸಾರಿಗೆ ಆಯುಕ್ತರ ಸೂಚನೆಯಂತೆ ರಾಜ್ಯಾದ್ಯಂತ ತಪಾಸಣೆ ನಡೆಸಲಾಗುತ್ತಿದೆ.
ಕಾನೂನು ಉಲ್ಲಂಘಿಸಿ ನಾಗಾಲೋಟದಲ್ಲಿ ವಾಹನಗಳು: ಇಂದು ಬರೋಬ್ಬರಿ 63 ಪ್ರಕರಣಗಳು ದಾಖಲು: ಆಪರೇಷನ್ ಪೋಕಸ್ ಮೂಲಕ ಹಲವು ಬಲೆಗೆ
0
ಅಕ್ಟೋಬರ್ 08, 2022