ನವದೆಹಲಿ: ಆದಾಯ ತೆರಿಗೆ ಇಲಾಖೆಯು 2021-22ನೇ ಹಣಕಾಸು ವರ್ಷಕ್ಕೆ ತೆರಿಗೆ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುವ ಅಂತಿಮ ದಿನಾಂಕವನ್ನು ಅಕ್ಟೋಬರ್ 7 ರವರೆಗೆ 7 ದಿನ ಕಾಲ ವಿಸ್ತರಿಸಿದೆ.
2022-23ರ ಮೌಲ್ಯಮಾಪನ ವರ್ಷಕ್ಕೆ ಲೆಕ್ಕಪರಿಶೋಧನೆಯ ವಿವಿಧ ವರದಿಗಳನ್ನು ಸಲ್ಲಿಸುವಲ್ಲಿ ತೆರಿಗೆದಾರರು ಮತ್ತು ಇತರರು ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(CBDT) ಲೆಕ್ಕಪರಿಶೋಧನೆಯ ವಿವಿಧ ವರದಿಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಆದಾಯ ತೆರಿಗೆ ಕಾಯ್ದೆಯಡಿ, ಚಾರ್ಟರ್ಡ್ ಅಕೌಂಟೆಂಟ್‌ನಿಂದ ತಮ್ಮ ಖಾತೆಗಳನ್ನು ಆಡಿಟ್ ಮಾಡಬೇಕಾದ ತೆರಿಗೆದಾರರು ಸೆಪ್ಟೆಂಬರ್ 30 ರೊಳಗೆ ತೆರಿಗೆ ಲೆಕ್ಕಪರಿಶೋಧನಾ ವರದಿಯನ್ನು ಐಟಿ ಇಲಾಖೆಗೆ ಸಲ್ಲಿಸಬೇಕಾಗಿತ್ತು. ಈಗ ಅದನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಗಿದೆ.