ಭಾರತದ ವಿವಿಧ ಭಾಗಗಳಲ್ಲಿ ಓಮಿಕ್ರಾನ್ ಬಿಎಫ್ 7 ಉಪ-ವೇರಿಯಂಟ್ ಪತ್ತೆಯಾದ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಶ್ರದ್ಧೆಯಿಂದ ಅನುಸರಿಸಬೇಕು ಎಂದು ತಜ್ಞರು ಕರೆ ನೀಡಿದ್ದಾರೆ.
ಓಮಿಕ್ರಾನ್ ಸ್ಪಾನ್' ಎಂದು ಕರೆಯಲ್ಪಡುವ BF.7 ಉಪ ತಳಿ ಹೆಚ್ಚಿನ ಪ್ರಸರಣವನ್ನು ಹೊಂದಿದೆ ಮತ್ತು ಲಸಿಕೆ ಪ್ರತಿರಕ್ಷೆಯನ್ನು ಮೀರಿ ಹೋಗುವ ಸಾಧ್ಯತೆ ಇದೆ ಎಂದು ಕೇರ್ ಹಾಸ್ಪಿಟಲ್ಸ್ ಗ್ರೂಪ್‌ನ ಆಂತರಿಕ ವೈದ್ಯಕೀಯ ಸಲಹೆಗಾರ ನವೋದಯ ಗಿಲ್ಲಾ ಅವರು ಎಚ್ಚರಿಸಿದ್ದಾರೆ.
ಈ ಹೊಸ ರೂಪಾಂತರಿ ಹಿಂದಿನ ರೂಪಾಂತರದೊಂದಿಗೆ ನೈಸರ್ಗಿಕ ಸೋಂಕಿನ ಮೂಲಕ ಅಥವಾ ಲಸಿಕೆಗಳ ಸಂಪೂರ್ಣ ಕೋರ್ಸ್ ತೆಗೆದುಕೊಂಡರೂ ಸಹ ಸೋಂಕು ತಗುಲುವ ಸಾಧ್ಯತೆ ಇದೆ" ಎಂದು ಅವರು ಹೇಳಿದ್ದಾರೆ.
"ಈ ಹೊಸ ಓಮಿಕ್ರಾನ್ ರೂಪಾಂತರವು ಮೊದಲು ಚೀನಾದಲ್ಲಿ ಪತ್ತೆಯಾಯಿತು. ಭಾರತದಲ್ಲಿ
ಓಮಿಕ್ರಾನ್ (Omicron) ಉಪ ತಳಿಯ ಮೊದಲ ಪ್ರಕರಣವನ್ನು ಗುಜರಾತ್‌ನಲ್ಲಿ
ಪತ್ತೆಹಚ್ಚಲಾಗಿದೆ.
ಆರಂಭದಲ್ಲಿ ಈ ವೈರಸ್ ಹಲವಾರು ಬಾರಿ ರೂಪಾಂತರಗೊಂಡಿತು ಮತ್ತು WHO ಡೆಲ್ಟಾ ರೂಪಾಂತರ ಅತ್ಯಂತ ತೀವ್ರವಾದದ್ದು ಎಂದು ಘೋಷಿಸಿತು" ಎಂದು ಗಿಲ್ಲಾ ತಿಳಿಸಿದ್ದಾರೆ.
"ಹೊಸ BF.7 ಉಪ-ವೇರಿಯಂಟ್‌ನ ಲಕ್ಷಣಗಳು ಸಾಮಾನ್ಯ ಜ್ವರಕ್ಕೆ ಹೋಲುತ್ತವೆ ಮತ್ತು ಶೀತ, ಕೆಮ್ಮು, ಜ್ವರ, ದೇಹದ ನೋವು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದು ಹೆಚ್ಚು ಹರಡುವ ಕಾರಣ ಕಡಿಮೆ ಅವಧಿಯೊಳಗೆ ದೊಡ್ಡ ಗುಂಪಿನ ಜನರಿಗೆ ಹರಡುತ್ತದೆ. ಹೀಗಾಗಿ ಜನ ಕೋವಿಡ್ಯ ನಿಯಮಗಳನ್ನು ಪಾಲಿಸಬೇಕು" ಎಂದು ಅವರು ಹೇಳಿದ್ದಾರೆ.