ಕಾಸರಗೋಡು: ಭೂ ರಹಿತ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಭೂಮಿ ಹಾಗೂ ವಸತಿ ರಹಿತರಿಗೆ ವಸತಿ ನೀಡಬೇಕು. ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆಗ್ರಹಿಸಿದೆ. ಪರಿಶಿಷ್ಟ ಪಂಗಡದ ಪ್ರದೇಶದಲ್ಲಿ ಇದನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ವಿಭಾಗದ ಯಾರೂಬ್ಬರು ಭೂರಹಿತ ಮತ್ತು ವಸತಿ ರಹಿತರಾಗಿರಬಾರದು. ಈ ನಿಟ್ಟಿನಲ್ಲಿ ನವೆಂಬರ್ 7 ರಂದು ಶಾಸಕರ ಸಭೆ ಕರೆಯಲು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ನಿರ್ಧರಿಸಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕರಂದಕ್ಕಾಡ್-ತಳಂಗರೆ ರಸ್ತೆ ಕಾಮಗಾರಿಯಿಂದ ಗುತ್ತಿಗೆದಾರರು ಹಿಂದೆ ಸರಿದ ಕಾರಣ ಮರು ಟೆಂಡರ್ ಕರೆಯಲು ನಿರ್ಧರಿಸಲಾಯಿತು. ರೈಲ್ವೆ ನಿಲ್ದಾಣದ ಬಳಿ ಸುತ್ತುಗೋಡೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಕಂದಾಯ ಭೂಮಿಯನ್ನು ಅಳತೆ ಮಾಡಿ ಸರಿಪಡಿಸಲು ಜಂಟಿ ಪರಿಶೀಲನೆ ನಡೆಸುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು. ಕಾಞಂಗಾಡ್ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ಬಸ್‍ಗಳು ಸಂಚರಿಸದಿರುವ ಸಮಸ್ಯೆಯ ಬಗ್ಗೆಯೂ ಕೂಲಂಕಷವಾಗಿ ಚರ್ಚಿಸಲಾಯಿತು. ಸದ್ಯ ಪ್ರಯಾಣಿಕರು ಹಳೆ ಬಸ್ ನಿಲ್ದಾಣದಲ್ಲಿ ಇಳಿದು ಮತ್ತೊಂದು ವಾಹನದಲ್ಲಿ ಹೊಸ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದಾರೆ. ಪ್ರತಿ ಸ್ಟೇಜ್ ಗೆ ಇರುವ ಪ್ರಯಾಣ ದರದ ಕುರಿತು ಪರಿಶೀಲಿಸಲು ನವೆಂಬರ್ 8 ರಂದು ಆರ್‍ಟಿಎ ಸಭೆ ನಡೆಸಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಆರ್ ಟಿ ಎ ಸಭೆ ನಡೆಸಲು ನಿರ್ಧರಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಂಗವಾಗಿ ಬದಲಾವಣೆ ಮಾಡಿರುವ ಮಿನಿಮಾಸ್ಟ್ ಹಾಗೂ ಹೈಮಾಸ್ಟ್ ದೀಪಗಳ ಮರು ಸ್ಥಾಪನೆಗೆ ತಗಲುವ ವೆಚ್ಚವನ್ನು ಅಂದಾಜಿನಲ್ಲಿ ಸೇರಿಸಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಪರಿಶಿಷ್ಟ ಪಂಗಡದ ಎಲ್ಲಾ ಕುಟುಂಬಗಳಿಗೂ ಭೂಮಿ ಮತ್ತು ಮನೆ: ನವೆಂಬರ್ 7 ರಂದು ಶಾಸಕರ ಸಭೆ
0
ಅಕ್ಟೋಬರ್ 30, 2022