ತಿರುವನಂತಪುರ: ದೀಪಾವಳಿ ಸಂದರ್ಭದಲ್ಲಿ ಸಿಡಿಮದ್ದು-ಪಟಾಕಿ ಹಚ್ಚುವುದರಲ್ಲಿ ರಾಜ್ಯ ಸರ್ಕಾರ ನಿರ್ದೇಶನ ಹೇರಿ ಆದೇಶ ಹೊರಡಿಸಿದೆ. ದೀಪಾವಳಿ ಹಬ್ಬದಂದು ರಾತ್ರಿ 8 ರಿಂದ 10 ರವರೆಗೆ ಮತ್ತು ಕ್ರಿಸ್‍ಮಸ್ ಮತ್ತು ಹೊಸ ವμರ್Áಚರಣೆ ವೇಳೆ ರಾತ್ರಿ 11.55 ರಿಂದ 12.30 ರವರೆಗೆ ಮಿತಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ವಾಯು ಮಾಲಿನ್ಯ ನಿಯಂತ್ರಣದ ಭಾಗವಾಗಿ ಸರ್ಕಾರ ಈ ಆದೇಶ ಹೊರಡಿಸಿದೆ. ಈ ಪ್ರಸ್ತಾವನೆಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶವನ್ನು ಆಧರಿಸಿದೆ. ದೀಪಾವಳಿ ಹಬ್ಬದ ಪ್ರಯುಕ್ತ ರಾತ್ರಿ 8 ರಿಂದ 10 ರವರೆಗೆ ಮತ್ತು ಕ್ರಿಸ್‍ಮಸ್ ಮತ್ತು ಹೊಸ ವμರ್Áಚರಣೆಗೆ ರಾತ್ರಿ 11.55 ರಿಂದ 12.30 ರವರೆಗೆ ಮಾತ್ರ ಪಟಾಕಿ ಸಿಡಿಸುವ ಸಮಯವನ್ನು ನಿರ್ಬಂಧಿಸಿ ನ್ಯಾಯಮಂಡಳಿ ಆದೇಶ ಹೊರಡಿಸಿದೆ.
ಆಚರಣೆಗಳಲ್ಲಿ ಪರಿಸರಸ್ನೇಹೀ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ರಾಜ್ಯದಲ್ಲಿ ಪಟಾಕಿ ಸಿಡಿಸಲು ಸಮಯ ನಿರ್ಬಂಧ ಹಾಗೂ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.
ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ: ಪರಿಸರ ಸ್ನೇಹೀ ಸಿಡಿಮದ್ದಿಗೆ ಮಾತ್ರ ಅವಕಾಶ: ಸರ್ಕಾರದಿಂದ ಆದೇಶ
0
ಅಕ್ಟೋಬರ್ 22, 2022