ರಾಮನಾಥಪುರಂ : ಭಾರತೀಯ ರೈಲ್ವೆ ಇಲಾಖೆಯ ವತಿಯಿಂದ ರಾಮೇಶ್ವರಂನ ಪಂಬನ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಕಾಮಗಾರಿ ಶೇ 81ರಷ್ಟು ಪೂರ್ಣಗೊಂಡಿದೆ.
ಕಾಮಗಾರಿ ಕುರಿತು ಟ್ವೀಟ್ ಮಾಡಿರುವ ರೈಲ್ವೆ ಇಲಾಖೆ, 'ಶೇ 81ರಷ್ಟು ಕೆಲಸ ಪೂರ್ಣಗೊಂಡಿದೆ.
ಪೈಲಿಂಗ್ ಕಾಮಗಾರಿ (ಸಿಮೆಂಟ್ ಕಂಬಗಳ ಅಳವಡಿಕೆ) 333 ಪೈಲ್‌ಗಳು ಪೂರ್ಣಗೊಂಡಿವೆ. 101 ಪೈಲ್ ಕ್ಯಾಪ್ ರಚನೆ ಪೂರ್ಣಗೊಂಡಿದೆ. ಪಿಲ್ಲರ್‌ಗಳ ಮೇಲೆ ಗರ್ಡರ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, 99ರಲ್ಲಿ ಈವರೆಗೆ 76 ಅನ್ನು ಪೂರ್ಣಗೊಳಿಸಲಾಗಿದೆ' ಎಂದು ಮಾಹಿತಿ ನೀಡಿದೆ.
2020ರ ಜುಲೈ1 ರಂದು ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ₹250 ಕೋಟಿ ವೆಚ್ಚ ತಗಲುವ ಈ ಯೋಜನೆಯಿಂದ ಹಲವು ಉಪಯೋಗಗಳಿವೆ ಎಂದು ಇಲಾಖೆ ತಿಳಿಸಿದೆ.
ಈಗಿರುವ 105 ವರ್ಷಗಳ ಹಳೆಯ ಸೇತುವೆ ಪಕ್ಕದಲ್ಲಿಯೇ ನಿರ್ಮಾಣವಾಗುತ್ತಿರುವ ಈ ಸೇತುವೆಯಲ್ಲಿ ವರ್ಟಿಕಲ್ ಲಿಫ್ಟ್ ಅಳವಡಿಸಲಾಗಿದೆ. ಈಗಿರುವ ಹಳೆಯ ರೈಲು ಮಾರ್ಗದಲ್ಲಿ ಸರಕು ಸಾಗಾಣಿಕೆ ಕಷ್ಟ. ಆದರೆ, ಹೊಸ ಸೇತುವೆಯಲ್ಲಿ ಹಡಗುಗಳು ಮೂಲಕ ಹೆಚ್ಚಿನ ಸರಕು ಸಾಗಾಣಿಕೆ ಮಾಡಲು ಸುಲಭವಾಗಿ ಅವಕಾಶವಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.India's 1st vertical lift Railway Sea Bridge- Pamban Bridge connecting the mainland of India with Rameswaram Island.
• 81% work completed
• Piling Work: All 333 piles completed
• Pile cap & Sub-Structure: All 101 completed
• 76 out of 99 girders launched