ತಿರುವನಂತಪುರ: ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ನೊಂದಿಗೆ ರಾಜ್ಯ ಪೋಲೀಸ್ ಪಡೆಯ 873 ಮಂದಿ ಸಿಬ್ಬಂದಿಗಳು ಸಂಪರ್ಕ ಹೊಂದಿದ್ದಾರೆ ಎಂದು ಎನ್ ಐಎ ವರದಿ ನೀಡಿದ್ದು, ವರದಿ ಆಧಾರ ರಹಿತ ಎಂದು ಕೇರಳ ಪೋಲೀಸರು ಹೇಳಿದ್ದಾರೆ.
ಎನ್ ಐಎ ವರದಿಯನ್ನು ರಾಜ್ಯ ಪೆÇಲೀಸ್ ಮುಖ್ಯಸ್ಥರಿಗೆ ಹಸ್ತಾಂತರಿಸಲಾಗಿದೆ ಎಂಬ ಸುದ್ದಿ ಹಬ್ಬಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಪೆÇಲೀಸರು ಪತ್ರಿಕಾ ಪ್ರಕಟಣೆ ಮೂಲಕ ವಿವರಣೆ ನೀಡಿದ್ದಾರೆ.
ಪಾಪ್ಯುಲರ್ ಫ್ರಂಟ್ ಬ್ಯಾನ್ ಆದ ನಂತರ ಸಂಘಟನೆಗೆ ಸಹಾಯ ಮಾಡಿದ ಪೆÇಲೀಸರ ಮೇಲೆ ನಿಗಾ ಇಡಲಾಗಿದೆ ಎಂಬ ವರದಿಗಳು ಬಂದಿದ್ದವು. ಪೆÇಲೀಸರ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ನಿಷೇಧಿತ ಸಂಘಟನೆಗೆ ಸಹಾಯ ಮಾಡಿದ್ದಾರೆ ಎಂದು ಪ್ರಚಾರವಾಗಿತ್ತು.
ಸಿವಿಲ್ ಪೆÇಲೀಸ್ ಅಧಿಕಾರಿಗಳು, ಎಸ್‍ಐಗಳು, ಎಸ್‍ಎಚ್‍ಒ ಶ್ರೇಣಿಯ ಅಧಿಕಾರಿಗಳು ಈ ಪಟ್ಟಿಯಲ್ಲಿದ್ದಾರೆ ಮತ್ತು ಅವರ ಹಣಕಾಸಿನ ಮಾಹಿತಿಯನ್ನು ತನಿಖಾ ಸಂಸ್ಥೆಗಳು ಮೇಲ್ವಿಚಾರಣೆ ಮಾಡುತ್ತಿವೆ ಎಂದು ವರದಿಯಾಗಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ಕೇರಳ ಪೆÇಲೀಸರು ಸ್ಪಷ್ಟಪಡಿಸಿದ್ದಾರೆ.
ಪೆÇಲೀಸರಲ್ಲಿ ಪಾಪ್ಯುಲರ್ ಫ್ರಂಟ್ ಮತ್ತು ಎಸ್‍ಡಿಪಿಐಗೆ ಸಹಾಯ ಮಾಡುವವರಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಸಕ್ರಿಯವಾಗಿದೆ. ಆರ್‍ಎಸ್‍ಎಸ್ ಮುಖಂಡರ ಮಾಹಿತಿಯನ್ನು ಪಾಪ್ಯುಲರ್ ಫ್ರಂಟ್‍ಗೆ ಸೋರಿಕೆ ಮಾಡಿದ್ದ ಸಿವಿಲ್ ಪೆÇಲೀಸ್ ಅಧಿಕಾರಿ ಪಿ.ಕೆ.ಅನಾಸ್ ಅವರನ್ನು ಕೂಡ ಈ ಹಿಂದೆ ಬಂಧಿಸಲಾಗಿತ್ತು. ಪೆÇಲೀಸರು ಸಂಗ್ರಹಿಸಿದ್ದ ಆರ್‍ಎಸ್‍ಎಸ್ ನಾಯಕರ ವೈಯಕ್ತಿಕ ವಿವರಗಳನ್ನು ಅನಾಸ್ ಪಾಪ್ಯುಲರ್ ಫ್ರಂಟ್‍ಗೆ ಸೋರಿಕೆ ಮಾಡಿದ್ದಾರೆ. ಅನಾಸ್ ಈ ಮಾಹಿತಿಯನ್ನು ಪೆÇಲೀಸ್ ಡೇಟಾಬೇಸ್‍ನಿಂದ ತೆಗೆದುಕೊಂಡಿದ್ದರು.
ಎನ್‍ಐಎ ದಾಳಿ ವಿರೋಧಿಸಿ ಪಾಪ್ಯುಲರ್ ಫ್ರಂಟ್ ನಡೆಸಿದ ಹರತಾಳದ ವೇಳೆ ಹಿಂಸಾಚಾರ ಎಸಗಿ ಬಂಧಿತರನ್ನು ಪೆರುಂಬಾವೂರು ಠಾಣೆಗೆ ಕರೆತರುವಾಗ ಕಾಲಡಿ ಠಾಣೆಯ ಪೆÇಲೀಸ್ ಅಧಿಕಾರಿ ಸಿಯಾದ್ ನೆರವು ನೀಡಿರುವುದು ಬೆಳಕಿಗೆ ಬಂದಿದೆ. ಪೆÇೀಲೀಸರಲ್ಲಿ ಇನ್ನೂ ಸರ್ಕಾರಿ ಸಂಬಳ ಪಡೆದು ಪಾಪ್ಯುಲರ್ ಫ್ರಂಟ್ ನವರು ಇದ್ದಾರೆ ಎಂಬ ಬಲವಾದ ಆರೋಪವಿದೆ. ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ಈ ವಿಷಯವನ್ನು ಹಿಂದಿನಿಂದಲೂ ಗಂಭೀರವಾಗಿ ಪ್ರಸ್ತಾಪಿಸುತ್ತಲೇ ಬಂದಿವೆ. ಈ ನಡುವೆ ಎನ್ ಐಎ ವರದಿ ಕೈಸೇರಿದೆ ಎಂಬ ಸುದ್ದಿ ಹಬ್ಬಿದೆ.
ರಾಜ್ಯದ 873 ಮಂದಿ ಪೋಲೀಸ್ ಅಧಿಕಾರಿಗಳಿಗೆ ಪಾಪ್ಯುಲರ್ ಫ್ರಂಟ್ ಜೊತೆ ನಂಟು? ಎನ್‍ಐಎ ವರದಿ ಸುಳ್ಳು ಎಂದ ಕೇರಳ ಪೋಲೀಸ್
0
ಅಕ್ಟೋಬರ್ 04, 2022
Tags