ತಿರುವನಂತಪುರ: ರಾಜ್ಯದ ಪ್ರಮುಖ ಆರ್‍ಎಸ್‍ಎಸ್ ನಾಯಕರಿಗೆ ಕೇಂದ್ರ ಗೃಹ ಸಚಿವಾಲಯ ವೈ ಕೆಟಗರಿ ಭದ್ರತೆ ನೀಡಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್‍ನಿಂದ ಕೇರಳದ ಐವರು ಆರ್‍ಎಸ್‍ಎಸ್ ನಾಯಕರು ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಕೇಂದ್ರವು ಎಚ್ಚರಿಕೆ ನೀಡಿದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಪಿಎಫ್‍ಐ ಕಾರ್ಯಕರ್ತ ಮುಹಮ್ಮದ್ ಬಶೀರ್ ಅವರ ನಿವಾಸದ ಮೇಲೆ ಇಡಿ ನಡೆಸಿದ ದಾಳಿಯಲ್ಲಿ ಹಿಟ್‍ಲಿಸ್ಟ್ ಪತ್ತೆಯಾಗಿತ್ತು. ಪಟ್ಟಿಯಲ್ಲಿ ನಮೂದಿಸಿರುವವರಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ನಾಯಕರ ಭದ್ರತೆಗೆ ಅರೆಸೈನಿಕ ಕಮಾಂಡೋಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಹೇಳಿದೆ. ಎರಡು ಪಾಳಿಯಲ್ಲಿ 11 ಮಂದಿ ಭದ್ರತೆ ಒದಗಿಸಲಿದ್ದಾರೆ. ಗುಪ್ತಚರ ವರದಿ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದೆ ಕೇಂದ್ರ ಪಡೆಗಳು ಆಲುವಾದಲ್ಲಿ ಆರ್‍ಎಸ್‍ಎಸ್ ಮುಖಂಡರಿಗೆ ಭದ್ರತೆ ಒದಗಿಸಿದ್ದವು. ಇದಲ್ಲದೇ ಇನ್ನೂ ಐವರು ನಾಯಕರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ನಾಯಕರ ಹೆಸರನ್ನು ಬಿಡುಗಡೆ ಮಾಡಿಲ್ಲ.
ಪಿ.ಎಫ್.ಐ ಬೆದರಿಕೆ: ಆರ್‍ಎಸ್‍ಎಸ್ ನಾಯಕರಿಗೆ ಕೇಂದ್ರ ವೈ ಕೆಟಗರಿ ಭದ್ರತೆ
0
ಅಕ್ಟೋಬರ್ 01, 2022
Tags