ನವದೆಹಲಿ: ಟಾಟಾ ಮಾಲೀಕತ್ವದ ಏರ್ ಇಂಡಿಯಾ ವೈಮಾನಿಕ ಸಂಸ್ಥೆಯು ತನ್ನ ದೇಶೀಯ ಸಂಚಾರದ ಮಾರ್ಗಗಳಲ್ಲಿ ಹಬ್ಬಗಳ ಸಾಲಿನ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಹೆಸರಾದ, ಹೊಸ ಆಹಾರಗಳನ್ನು ಸೇರ್ಪಡೆಗೊಳಿಸಿ ಮೆನು ಪ್ರಕಟಿಸಿದೆ.
ಟಾಟಾ ಸಂಸ್ಥೆಯು ಈ ವರ್ಷದ ಜನವರಿಯಲ್ಲಿ ಏರ್ ಇಂಡಿಯಾವನ್ನು ಖರೀದಿಸಿತ್ತು.
ನಷ್ಟದಲ್ಲಿದ್ದ ಸಂಸ್ಥೆಗೆ ಚೇತರಿಕೆ ನೀಡುವ ಯತ್ನ ನಡೆದಿದ್ದು, ಸಂಚಾರ ಸೇವೆ ಮಾರ್ಗ ವೃದ್ಧಿ, ಒಟ್ಟು ಮಾರುಕಟ್ಟೆ ಪಾಲು ಹೆಚ್ಚಿಸಲು ಆದ್ಯತೆಯನ್ನು ನೀಡಲಾಗಿದೆ.
ಮಸಾಲೆಯುಕ್ತ, ಸ್ಥಳೀಯವಾಗಿ ಹೆಸರಾಗಿರುವ ಆಹಾರಗಳನ್ನು ಮೆನುವಿಗೆ ಸೇರಿಸಲಾಗಿದೆ. ಅಕ್ಟೋಬರ್ 1ರಿಂದ ಇದು ಜಾರಿಗೆ ಬಂದಿದೆ ಎಂದು ವಿಮಾನ ಒಳಾಂಗಣ ಸೇವೆ ವಿಭಾಗದ ಮುಖ್ಯಸ್ಥ ಸಂದೀಪ್ ವರ್ಮಾ ಅವರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಾರ್ಗಗಳಲ್ಲಿಯೂ ಹೆಚ್ಚುವರಿ ಆಹಾರಗಳ ಸೇರ್ಪಡೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.