ಮುಳ್ಳೇರಿಯ; ಕಾನಕ್ಕೋಡಿನಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ವನಶಾಸ್ತಾ ಕ್ಷೇತ್ರದ ಬೃಹ್ಮಕಲಶೋತ್ಸವ ಕಾರ್ಯಕ್ರಮ ಡಿ. 23ರಿಂದ 25ರ ವರೆಗೆ ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಇದರ ಪೂರ್ವಭಾವಿಯಾಗಿ ನೂತನ ಸಮಿತಿ ಹಾಗೂ ಉಪಸಮಿತಿಗಳನ್ನು ರೂಪೀಕರಿಸಲಾಯಿತು. ಸಭೆಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಮಣಿಯಾಣಿ ಕೋಳಿಕ್ಕಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಬಾಲಕೃಷ್ಣನ್ ಮೀತಲೆವೀಡ್, ಪ್ರಮುಖರಾದ ದೇವಾನಂದ ಶೆಟ್ಟಿ, ಕುಂಞÂ ಕಣ್ಣನ್ ಮಣಿಯಾಣಿ ಎಡತ್ತೋಡು, ಸರಸ್ವತಿ ದರ್ಖಾಸು ಮೊಲಾದವರು ಮಾತನಾಡಿದರು. ಸಭೆಯಲ್ಲಿ ಊರ ಹಾಗೂ ಪರವೂರಿನ ನೂರಾರು ಭಗವದ್ಬಕ್ತರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು ಸಮಾರಂಭದಲ್ಲಿ ದೇವಾನಂದ ಶೆಟ್ಟಿ ಸ್ವಾಗತಿಸಿ, ನಾರಾಯಣ ಇತ್ತಿಕಾಲಮೂಲೆ ವಂದಿಸಿದರು.