ಬದಿಯಡ್ಕ: ಕೇರಳ ರಾಜ್ಯಾದ್ಯಂತ ನಡೆಸುತ್ತಿರುವ ಮಾದಕದ್ರವ್ಯ ವಿರೋಧಿ ಆಂದೋಲನದ ಭಾಗವಾಗಿ ಪೆರಡಾಲ ಸರ್ಕಾರಿ ಫ್ರೌಢಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
ರಾಜ್ಯ ಮಟ್ಟದ ಉದ್ಘಾಟನೆ ನೆರವೇರಿಸಿದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರ ಭಾಷಣದ ಪ್ರಸಾರ ವ್ಯವಸ್ಥೆಯನ್ನು ಮಕ್ಕಳಿಗೆ ಮತ್ತು ರಕ್ಷಕರಿಗಾಗಿ ವ್ಯವಸ್ಥೆಮಾಡಲಾಗಿತ್ತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ ಭಾಗವಹಿಸಿ ಮಕ್ಕಳಲ್ಲಿ ಮತ್ತು ರಕ್ಷಕರಲ್ಲಿ ಬೆಳೆಸಬೇಕಾದ ಉತ್ತಮ ಹವ್ಯಾಸಗಳನ್ನು ವಿವರಿಸಿದರು.
ಶಾಲೆಯ ಮುಖ್ಯ ಶಿಕ್ಷಕ ರಾಜಗೋಪಾಲ ಅವರು ಶಾಲೆಯ ಮಕ್ಕಳಲ್ಲಿ ಇರಬೇಕಾದ ಶಿಸ್ತುಬಧ್ಧ ಜೀವನಶೈಲಿಯ ವಿವರಣೆಯಿತ್ತರು. ಪ್ರತಿ ತರಗತಿಯಲ್ಲಿ ಪ್ರತಿಜ್ಞೆ,ಹಾಡು,ವಿಡಿಯೋ ಪ್ರದರ್ಶನ, ತಿಳುವಳಿಕಾ ತರಗತಿ,ಪೋಸ್ಟರ್ ರಚನೆ ಮೊದಲಾದ ಚಟುವಟಿಕೆ ನಡೆಸಲಾಯಿತು. ಶಿಕ್ಷಕ ರಿಶಾದ್ ಪಿ.ಎಂ.ಎ.ವಂದಿಸಿದರು.