HEALTH TIPS

ಪೋಲೀಸರ ಬಳಿ ವಿಚಾರಣೆಗೆ ಬರುವ ಮುನ್ನ ಗೂಗಲ್ ನಲ್ಲಿ ಎಲ್ಲವನ್ನೂ ಹುಡುಕಿ ಅರ್ಥ ಮಾಡಿಕೊಂಡ ಮಹಾ ಹಂತಕಿ: ಪೋಷಕರಿಗೂ ತರಬೇತಿ: ಕೊಲೆಯ ಹಿಂದಿನ ಕಥೆ


                 ತಿರುವನಂತಪುರ: ಪಾರಶಾಲದಲ್ಲಿ ಶರೋನ್ ಸಾವಿಗೆ ಆತನ ಗೆಳತಿ ಗ್ರೀಷ್ಮಾಳ ದೀರ್ಘಾವಧಿಯ ಪ್ಲಾನಿಂಗ್ ಕಾರಣ ಎಂಬುದು ಸಾಬೀತಾಗಿದೆ. ಶರೋನ್ ನ ಪತ್ನಿಯಂತೆ ನಟಿಸಿ ಪ್ರತಿದಿನ ಸಿಂಧೂರ ಧರಿಸಿರುವ ಫೆÇೀಟೋಗಳನ್ನು ಕಳುಹಿಸಿ ಶರೋನ್ ನ ವಿಶ್ವಾಸ ಗಳಿಸಿದ್ದ ಗ್ರೀಷ್ಮಾ ತನ್ನ ಪ್ರಿಯಕರನಿಗೆ ಮರಣಶಾಸನ ಸಿದ್ಧಪಡಿಸುತ್ತಿದ್ದಳು.
           ಆಗಾಗ ಶರೋನ್ ವಾಂತಿ ಮಾಡಿಕೊಳ್ಳುತ್ತಿದ್ದರಿಂದ ತನಗೆ ಅನುಮಾನ ಬರುವುದಿಲ್ಲ ಎಂದುಕೊಂಡಳು ಗ್ರೀμÁ್ಮ. ಆದರೆ ಶರೋನ್ ಕುಟುಂಬವು ಆರೋಪಗಳನ್ನು ಮುಂದಿಟ್ಟಾಗ, ಪೋಲೀಸರ ಅನುಮಾನಗಳು ತನ್ನತ್ತ ತಿರುಗುತ್ತಿದೆ ಎಂದು ಗ್ರೀಷ್ಮಾ ಅರಿತುಕೊಂಡಳು. ಇದರೊಂದಿಗೆ ಪೋಲೀಸರ ವಿಚಾರಣೆಗೆ ಬರುವ ಮುನ್ನ ಗೂಗಲ್ ನಲ್ಲಿ ವಿಚಾರಣೆ ಹೇಗೆ ಎದುರಿಸಬೇಕು ಎಂಬಬಗ್ಗೆ ಸರ್ಚ್ ಮಾಡಿ ಅರ್ಥ ಮಾಡಿಕೊಂಡಿದ್ದಳು. ಪೋಲೀಸರಿಗೆ ಹೇಗೆ ಪ್ರತಿಕ್ರಿಯಿಸಬಾರದು ಎಂಬುದನ್ನು ಪೋಷಕರಿಗೂ ಕಲಿಸಿದ್ದಳು. ಆದರೆ ಹಿಂದಿನ ಹೇಳಿಕೆಗಳು, ವಾಟ್ಸಾಪ್ ಚಾಟ್‍ಗಳು, ವೀಡಿಯೊಗಳು ಮತ್ತು ಧ್ವನಿ ಸಂದೇಶಗಳಲ್ಲಿನ ವಿರೋಧಾಭಾಸಗಳು ಗ್ರೀಷ್ಮಾಗೆ ಉರುಳಾಯಿತು.
            ಹತ್ಯೆಗೀಡಾದ ಶರೋನ್ ಮತ್ತು ಗ್ರೀಷ್ಮಾ ಪ್ರೀತಿಸಿ ಕೇವಲ ಒಂದು ವರ್ಷವಾಗಿದೆ, ಇಬ್ಬರೂ ಒಟ್ಟಿಗೆ ಬಸ್ ಪ್ರಯಾಣದಲ್ಲಿ ಪರಸ್ಪರ ಹತ್ತಿರವಾದರು. ಅಳಖಿಮಂಡಪಂ ಮುಸ್ಲಿಂ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು ಗ್ರೀಷ್ಮಾ ಮತ್ತು ಶರೋನ್. ಬಳಿಕ ನೆಯೂರ್ ಕ್ರಿಶ್ಚಿಯನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಪ್ರತಿದಿನ ಒಂದೇ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು.  ಗ್ರೀಷ್ಮಾಳೊಂದಿಗೆ ಅಳಖಿಮಂಡಪಟ್‍ನಲ್ಲಿ ಬಸ್‍ನಿಂದ ಇಳಿದ ಬಳಿಕ ಶರೋನ್, ಗ್ರೀಷ್ಮಾಳೊಂದಿಗೆ ಬಹಳ ಸಮಯ ಕಳೆದು ನಂತರ ನೆಯೂರಿಗೆ ಮತ್ತೊಂದು ಬಸ್‍ನಲ್ಲಿ ತೆರಳುತ್ತಿದ್ದ ಎಂದು ಶರೋನ್ ಸ್ನೇಹಿತರು ಹೇಳುತ್ತಾರೆ.
           ಅವರ ಪ್ರೀತಿ ಗಾಢವಾಗುತ್ತಿದ್ದಂತೆ, ಇಬ್ಬರೂ ಶರೋನ್ ಅವರ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿದರು. ಕೆಲವು ದಿನ ಬೈಕ್‍ನಲ್ಲಿ ವಿವಿಧೆಡೆ ತೆರಳುತ್ತಿದ್ದರು. ಪ್ರವಾಸಗಳು ಕುಟುಂಬ ಸದಸ್ಯರನ್ನು ದಾರಿ ತಪ್ಪಿಸಿದ್ದವು.ಅಧ್ಯಯನದಲ್ಲಿ ಮೇಧಾವಿಯಾಗಿದ್ದ ಗ್ರೀಷ್ಮಾ ಬಳಿಕ ಕಲಿಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದಾಗ ಪ್ರೇಮ ಪ್ರಕರಣ ಮನೆಯವರಿಗೆ ತಿಳಿಯಿತು. ಆದರೆ ಸಂಬಂಧ ಮುರಿದುಬಿದ್ದಿದೆ ಎಂದು ತಪ್ಪಾಗಿ ನಂಬಿಸಿ ಇಬ್ಬರೂ ತಮ್ಮ ಪ್ರೀತಿಯನ್ನು ಮುಂದುವರೆಸಿದ್ದಾರೆ. ಏತನ್ಮಧ್ಯೆ, ಮನೆಯವರು ಸೈನಿಕನೋರ್ವನೊಂದಿಗೆ ವಿವಾಹ ನಿಶ್ಚಯಿಸಿದರು. ಮತ್ತು ಗ್ರೀಷ್ಮಾ ನಿಧಾನವಾಗಿ ಶರೋನ್‍ನಿಂದ ದೂರವಿರಲು ಪ್ರಾರಂಭಿಸುತ್ತಾಳೆ. ಖಾಸಗಿ ದೃಶ್ಯಾವಳಿಗಳು ಹೊರಗೆ ಹೋಗುವುದನ್ನು ತಡೆಯಲು ಈ ಕ್ರೂರ ಕೃತ್ಯ ಎಸಗಲಾಗಿದೆ ಎಂದು ಗ್ರೀಷ್ಮಾ ಪೋಲೀಸರಿಗೆ ಹೇಳಿಕೆ ನೀಡಿದ್ದಾಳೆ.  



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries