ನವದೆಹಲಿ: ಕೇರಳದಲ್ಲಿ ನಡೆದ ಅಭಿಚಾರ ಹತ್ಯೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆಯುತ್ತಿದೆ. ಘಟನೆ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ವರದಿ ಕೇಳಿದೆ.
ಹತ್ತು ದಿನಗಳೊಳಗೆ ತನಿಖಾ ತಂಡ ವರದಿ ಸಲ್ಲಿಸಬೇಕು ಎಂದು ಆಯೋಗ ಸೂಚಿಸಿದೆ. ಎರಡು ಕೊಲೆಗಳು ಆಘಾತಕಾರಿ ಘಟನೆ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಸಾಕ್ಷರತೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಬಹುತೇಕರು ವಿದ್ಯಾವಂತರು. ಹೀಗಿದ್ದೂ, ಕೇರಳದಲ್ಲಿ ಇಂತಹ ಕೊಲೆ ನಡೆದಿರುವುದು ನಿರಾಸೆ ಹಾಗೂ ಆಘಾತಕಾರಿ ಸಂಗತಿ ಎಂದಿರುವರು.
ಮೂಢನಂಬಿಕೆಯಿಂದ ಹಲವಾರು ಘೋರ ಅಪರಾಧಗಳು ನಡೆಯುತ್ತಿದ್ದು, ಈ ಬಗ್ಗೆ ಕೇರಳ ಸಮಾಜ ಗಂಭೀರವಾಗಿ ಅವಲೋಕಿಸಬೇಕಿದೆ ಎಂದು ಕೇರಳ ಮಹಿಳಾ ಆಯೋಗವೂ ಅಭಿಪ್ರಾಯಪಟ್ಟಿದೆ. ಮೂಢ ನಂಬಿಕೆಗಳು ಅಮಾನವೀಯವಾಗುತ್ತವೆ ಎಂಬುದಕ್ಕೆ ಈ ನರಬಲಿಗಳೇ ಇತ್ತೀಚಿನ ಉದಾಹರಣೆ ಎಂದು ಸತಿದೇವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಇದೇ ವೇಳೆ, ಏಜೆಂಟ್ ಲೈಂಗಿಕ ಕಾರ್ಯಕರ್ತರನ್ನು ವಾಮಾಚಾರದ ಕೊಲೆಗೆ ಒಳಪಡಿಸಲು ಸಂಪರ್ಕಿಸುತ್ತಿದ್ದ ಎಂದು ಪೋಲೀಸರು ಮಾಹಿತಿ ನೀಡಿದರು. ಇದೇ ಉದ್ದೇಶಕ್ಕಾಗಿ ಏಜೆಂಟರು ಯಾವ್ಯಾವ ಮಹಿಳೆಯರನ್ನು ಸಂಪರ್ಕಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ಮೃತಪಟ್ಟ ಮಹಿಳೆಯರ ಅವಶೇಷಗಳನ್ನು ದಂಪತಿಯ ಮನೆಯ ಆವರಣದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಸುಶಿಕ್ಷಿತ ವಿದ್ಯಾವಂತ ಕೇರಳದ ಜನರಿಂದ ಈ ತೆರದ ವಿಚಾರಗಳು ಅನಿರೀಕ್ಷಿತ: ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ
0
ಅಕ್ಟೋಬರ್ 11, 2022
Tags