ಅಂತಾರಾಷ್ಟ್ರೀಯ ಹಿರಿಯರ ದಿನಾಚರಣೆ ಅಂಗವಾಗಿ ಹಿರಿಯರ ಸಂಗಮ ಕಾರ್ಯಕ್ರಮ ಕಾಞಂಗಾಡ್ ರಾಷ್ಟ್ರೀಯ ಆರೋಗ್ಯ ಮಿಷನ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು. ಕಾಞಂಗಾಡು ನಗರಸಭೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಜಿಲ್ಲಾ ನರ್ಸಿಂಗ್ ಅಧಿಕಾರಿ ಪಿ.ಎಂ.ಮೇರಿಕುಟ್ಟಿ, ಜಿಲ್ಲಾ ಸಹಾಯಕ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎಸ್.ಸಯನಾ, ಜಿಲ್ಲಾ ಎಂಸಿಎಚ್ ಅಧಿಕಾರಿ ಎನ್.ಜಿ.ತಂಗಮಣಿ, ಡಿಪಿಎಚ್ ಎನ್.ಜೈನಮ್ಮ ಥಾಮಸ್, ಎಸ್‍ವಿಒ ಪಿ.ವಿ.ಲತಾ ಉಪಸ್ಥಿತರಿದ್ದರು.
ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್‍ಲತೀಫ್ ಮಠ ಸ್ವಾಗತಿಸಿದರು. ಜಿಲ್ಲಾ ಪಾಲಿಯೇಟಿವ್ ಸಂಯೋಜಕ ಶಿಜಿ ಶೇಖರ್ ವಂದಿಸಿದರು. ಈ ಸಂದರ್ಭ ನಡೆದ ಜಾಗೃತಿ ವಿಚಾರ ಸಂಕಿರಣದಲ್ಲಿ ಜೀವನಶೈಲಿ ರೋಗಗಳು, ವೃದ್ಧಾಪ್ಯ ಮತ್ತು ಮಾನಸಿಕ ಆರೋಗ್ಯ ಕುರಿತು ಎಣ್ಣಪಾರ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಸಾದ್ ಥಾಮಸ್.ಜಿಲ್ಲಾ ಆಸ್ಪತ್ರೆ ಡಿ.ಐ.ಸಿ. ಮನಶಾಸ್ತ್ರಜ್ಞೆ ಜ್ಯೋತಿಮಾ ತರಗತಿ ನಡೆಸಿದರು. ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಸುಭಾಷ ಆರುಕಾರ ನೇತೃತ್ವದಲ್ಲಿ ಜಾನಪದ ಹಾಡುಗಳ ಕಾರ್ಯಕ್ರಮ ನಡೆಯಿತು.
ಅಂತಾರಾಷ್ಟ್ರೀಯ ಹಿರಿಯರ ದಿನಾಚರಣೆ, ಹಿರಿಯರ ಸಂಗಮ
0
ಅಕ್ಟೋಬರ್ 04, 2022