ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅಭ್ಯರ್ಥಿ ಶಶಿ ತರೂರ್ ಹೇಳಿದ್ದಾರೆ. ತಾನು ಎಂದಿಗೂ ಸವಾಲುಗಳಿಂದ ಹಿಂದೆಸರಿಯುವುದಿಲ್ಲ ಎಂದು ಹೇಳಿರುವ ಶಶಿ ತರೂರ್, ಇದು ಪೂರ್ಣಗೊಳಿಸಬೇಕಾದ ಹೋರಾಟ ಎಂದು ಅಧ್ಯಕ್ಷ ಚುನಾವಣೆಯನ್ನು ಬಣ್ಣಿಸಿದ್ದಾರೆ.
ಚುನಾವಣೆಗಾಗಿ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ತರೂರ್, ಈ ಚುನಾವಣೆ ಪಕ್ಷದ ಒಳಗೆ ನಡೆಯುತ್ತಿರುವ ಸೌಹಾರ್ದಯುತ ಚುನಾವಣೆಯಾಗಿದ್ದು, ಸ್ಪರ್ಧೆಯನ್ನು ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಬಲವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ತರೂರ್ ಖರ್ಗೆ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. "ನಾನು ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇವೆ ಎಂಬ ಬಗ್ಗೆ ವದಂತಿಗಳು ಹಬ್ಬಿದೆ. ನಾನು ಸವಾಲಿನಿಂದ ಹಿಂದೆ ಸರಿಯುವುದಿಲ್ಲ ಎಂದು ತಿರುವನಂತಪುರಂ ನ ಸಂಸದರೂ ಆಗಿರುವ ಶಶಿ ತರೂರ್ ಹೇಳಿದ್ದಾರೆ.
Surprised to get calls saying that “sources in Delhi” claim that I have withdrawn! I am on this race till the finish. #ThinkTomorrowThinkTharoor