ಕಾಸರಗೋಡು: ಕೇಂದ್ರೀಯ ಸಾಕ್ಷರತಾ ಕಾರ್ಯಕ್ರಮವಾದ'ನವ ಭಾರತ ಸಾಕ್ಷರತಾ ಯೋಜನೆ'ಗೆ ಪಂಚಾಯಿತಿ ಮಟ್ಟದಿಂದ ಆಯ್ಕೆಯಾದ ಸಂಪನ್ಮೂಲ ವ್ಯಕ್ತಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮೂರು ದಿನಗಳ ತರಬೇತಿ ಅಕ್ಟೋಬರ್ 18ರಿಂದ 20ರ ವರೆಗೆ ಜಿಲ್ಲಾ ಪಂಚಾಯಿತಿ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ.
ಅಕ್ಟೋಬರ್ 18 ರ ಮಂಗಳವಾರ ಬೆಳಗ್ಗೆ 10ಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಈ ಸಂದರ್ಭ 92 ಆರ್ ಪಿ ಗಳಿಗೆ ತರಬೇತಿ ನೀಡಲಾಗುತ್ತದೆ. ಇವರ ನೇತೃತ್ವದಲ್ಲಿ ಅಕ್ಟೋಬರ್ 25 ರಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ತರಬೇತಿ ಕಾರ್ಯಕ್ರಮ ಆರಂಭಿಸಲಾಗುತ್ತದೆ. ಜಿಲ್ಲೆಯಲ್ಲಿ ಸಾಕ್ಷರತಾ ಕಲಿಯುವ 10 ಮಂದಿಗೆ ಒಂದು ಕ್ಲಾಸು ಎಂಬ ರೀತಿಯಲ್ಲಿ ಸುಮಾರು 750 ತರಗತಿಗಳು ಮತ್ತು 750 ಶಿಕ್ಷಕರು ಒಳಗೊಂಡಿದ್ದಾರೆ. ಈ ಶಿಕ್ಷಕರಿಗೆ ಪಂಚಾಯತ್ ಮಟ್ಟದಲ್ಲಿ ತರಬೇತಿ ನೀಡಲಾಗುತ್ತದೆ ಎಂದುಪ್ರಕಟಣೆ ತಿಳಿಸಿದೆ.
ನವ ಭಾರತ ಸಾಕ್ಷರತಾ ಕಾರ್ಯಕ್ರಮ: ನಾಳೆಯಿಂದ ತರಬೇತಿ
0
ಅಕ್ಟೋಬರ್ 16, 2022