ನವದೆಹಲಿ: ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾದಲ್ಲಿ ಹಿಂದೂ ದೇವರನ್ನು ತಪ್ಪಾಗಿ ಬಿಂಬಿಸಲಾಗಿದೆ. ಹೀಗಾಗಿ ಈ ಸಿನಿಮಾ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ವಕೀಲ ರಾಜ್ ಗೌರವ್ ಅವರು ಸಿನಿಮಾ ಬಿಡುಗಡೆಗೆ ಶಾಶ್ವತ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಚಿತ್ರದ ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಮತ್ತು ಸಹ-ನಿರ್ಮಾಪಕ ಓಂ ರಾವುತ್ ಅವರು ರಾಮಾಯಣದ ಮೂಲ ಅಂಶಗಳನ್ನು ದುರ್ಬಳಕೆ ಮಾಡಿದ್ದಾರೆ. ಸಿನಿಮಾದಲ್ಲಿ ಹಿಂದೂಗಳ ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಟೀಸರ್‌ನಲ್ಲಿ ರಾಮ ಮತ್ತು ಹನುಮನನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೂಲತಃ ರಾಮ ಪ್ರಶಾಂತ ಸ್ವಭಾವದ ವ್ಯಕ್ತಿ, ಆದರೆ ಸಿನಿಮಾದಲ್ಲಿ ಕ್ರೂರ ಎಂಬಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಈ ಅರ್ಜಿಯ ವಿಚಾರಣೆ ನಡೆಯಲಿದೆ.