ಪಂಪಾ: ಕೆ.ಜಯರಾಮನ್ ನಂಬೂದಿರಿ ಶಬರಿಮಲೆ ಮೇಲ್ಶಾಂತಿಯಾಗಿ ಆಯ್ಕೆಯಾಗಿದ್ದಾರೆ. ಇವರು ಕಣ್ಣೂರಿನ ತಳಿಪರಂಬ ಮೂಲದವರು. ಕಣ್ಣೂರಿನ ದೇವಾಲಯದಲ್ಲಿ ಅರ್ಚಕರಾಗಿದ್ದರು.
ಸನ್ನಿಧಾನದಲ್ಲಿ ನಡೆದ ಡ್ರಾದಲ್ಲಿ ಶಬರಿಮಲೆ ಮೇಲ್ಶಾಂತಿಯ ಹೆಸರನ್ನು ಪಂದಳಂ ಅರಮನೆಯಿಂದ ಕೃತಕೇಶ್ ವರ್ಮಾ ಘೋಷಿಸಿದರು. ಶಬರಿಮಲೆ ಮೇಲ್ಶಾಂತಿಗಳ ಅಂತಿಮ ಪಟ್ಟಿಯಲ್ಲಿ ಹತ್ತು ಮಂದಿ ಇದ್ದರು. ನೂತನ ಮೇಲ್ಶಾಂತಿಯನ್ನು ಏಳನೇ ಲಾಟ್‍ನಲ್ಲಿ ಆಯ್ಕೆ ಮಾಡಲಾಗಿದೆ.
ಕೆ.ಜಯರಾಜನ್ ನಂಬೂದಿರಿ ಪ್ರತಿಕ್ರಿಯಿಸಿ, ಮೇಲ್ಶಾಂತಿಯಾಗಿ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದ್ದು, ಆಯಪ್ಪನ ಅನುಗ್ರಹದಿಂದ ಸಾಧ್ಯವಾಗಿದೆ. ಶಬರಿಮಲೆಯಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗಿರುವುದು ದೊಡ್ಡ ಸೌಭಾಗ್ಯ ಎಂದರು.
ಮಾಳಿಗÀಪ್ಪುರಂ ಮೇಲ್ಶಾಂತಿಯಾಗಿ ಹರಿಹರನ್ ನಂಬೂದಿರಿ ಆಯ್ಕೆಯಾದರು. ಅವರು ಕೊಟ್ಟಾಯಂ ವೈಕಂ ಮೂಲದವರು. ಮಾಳಿಗಪ್ಪುರ ಮೇಲ್ಶಾಂತಿಯವರನ್ನು ಪಂದಳಂ ಅರಮನೆಯ ಪೌರ್ಣಮಿ ವರ್ಮ ಆಯ್ಕೆ ಮಾಡಿದ್ದಾರೆ. ಮಾಳಿಗಪ್ಪುರ ಮೇಲ್ಶಾಂತಿಗಳ ಅಂತಿಮ ಪಟ್ಟಿಯಲ್ಲಿ ಎಂಟು ಮಂದಿ ಇದ್ದರು.
ತುಲಾಮಾಸ ಪೂಜೆಯ ಅಂಗವಾಗಿ ನಿನ್ನೆ ಶ್ರೀಸನ್ನಿಧಿಯ ಗರ್ಭಗೃಹದ ಬಾಗಿಲು ತೆರೆಯಲಾಗಿದ್ದು 22 ರವರೆಗೆ ಶಬರಿಮಲೆಗೆ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿದ್ದು, ವರ್ಚುವಲ್ ಸರತಿ ಸಾಲಿನಲ್ಲಿ ಬುಕ್ ಮಾಡಿದ ಅಯ್ಯಪ್ಪ ಭಕ್ತರು ದರ್ಶನಕ್ಕೆ ತೆರಳಬಹುದಾಗಿದೆ. ನಿಲಯ್ಕಲ್ ನಲ್ಲಿ ಭಕ್ತರಿಗೆ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. 22ರಂದು ರಾತ್ರಿ 10 ಗಂಟೆಗೆ ಹರಿವರಾಸನಂ ಹಾಡುವ ಮೂಲಕ ದೇವಸ್ಥಾನದ ಬಾಗಿಲು ಮುಚ್ಚಲಾಗುವುದು. 24ರಂದು ಸಂಜೆ 5 ಗಂಟೆಗೆ ಚಿತ್ತಿರ ಅಟ್ಟ ವಿಶೇಷ ನಿಮಿತ್ತ ಮತ್ತೆ ದೇವಸ್ಥಾನದ ಬಾಗಿಲು ತೆರೆಯಲಾಗುವುದು. 25ರಂದು ಮುಚ್ಚಲಾಗುವುದು.