HEALTH TIPS

ಬ್ರಿಟನ್ ಪ್ರಧಾನಿ ಸುನಕ್ ಜೊತೆ ಪ್ರಧಾನಿ ಮೋದಿ ಮಾತು; ಎಫ್ ಟಿಎ ವಿಷಯ ಶೀಘ್ರ ಇತ್ಯರ್ಥಕ್ಕೆ ಉಭಯ ನಾಯಕರ ಒಪ್ಪಿಗೆ

             ಬ್ರಿಟನ್ ನ ನೂತನ ಪ್ರಧಾನಿ  ರಿಷಿ ಸುನಕ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅ.27 ರಂದು ಮಾತನಾಡಿದ್ದಾರೆ. 

            ಉಭಯ ನಾಯಕರೂ ಉಭಯ ರಾಷ್ಟ್ರಗಳ ನಡುವೆ ಸಮಗ್ರ ಹಾಗೂ ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

          ರಿಷಿ ಸುನಕ್   ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಜೊತೆ ಅವರು ಮಾತನಾಡಿದ್ದಾರೆ. 

                          ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿರುವ ಸುನಕ್, ಎರಡು ಶ್ರೇಷ್ಠ ಪ್ರಜಾಪ್ರಭುತ್ವ ದೇಶಗಳು ಮುಂಬರುವ ದಿನಗಳಲ್ಲಿ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದರೆ ಸಾಧಿಸಬಹುದಾದ ಅಂಶಗಳ ಕುರಿತು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. 

               ಪ್ರಧಾನಿ ಮೋದಿ ಅವರೂ ಟ್ವೀಟ್ ಮಾಡಿದ್ದು, ರಿಷಿ ಸುನಕ್ ಜೊತೆ ಮಾತನಾಡಿದ್ದು ಸಂತಸವಾಯಿತು, ಬ್ರಿಟನ್ ಪ್ರಧಾನಿ ಪದವಿ ಅಲಂಕರಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದೆ. ನಾವು ಪರಸ್ಪರ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಫ್ ಟಿಎ ವಿಷಯ ಶೀಘ್ರ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Thank you Prime Minister @NarendraModi for your kind words as I get started in my new role. The UK and India share so much. I'm excited about what our two great democracies can achieve as we deepen our security, defence and economic partnership in the months & years ahead.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries