ಕಾಸರಗೋಡು: ಮಾದಕ ವಸ್ತುಗಳ ಬಳಕೆಯನ್ನು ಸಮಾಜದಿಂದ ನಿರ್ಮೂಲನೆ ಮಾಡುವ ಉದ್ದೇಶದಿಂದ ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದಕ ವಸ್ತು ವಿರೋಧಿ ಜಾಗೃತಿ ವಿಚಾರ ಸಂಕಿರಣ ನಡೆಸಲಾಯಿತು. ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾಹಿತಿ ಕಛೇರಿ, ಅನೌಪಚಾರಿಕ ಶಿಕ್ಷಣ ಸಮಿತಿ ಕಾನ್ಪೆಡ್ ಹಾಗೂ ನೀಲೇಶ್ವರ ಮಹಾತ್ಮ ಬಿ.ಎಡ್ ಕಾಲೇಜು ಸಂಯುಕ್ತವಾಗಿ ಮಾದಕ ವಸ್ತು ವಿರೋಧಿ ಜಾಗೃತಿ ವಿಚಾರ ಸಂಕಿರಣವನ್ನು ನಡೆಸಲಾಯಿತು.
ನೀಲೇಶ್ವರ ಮಹಾತ್ಮಾ ಬಿಎಡ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಕಣ್ಣೂರು ವಿಶ್ವವಿದ್ಯಾನಿಲಯದ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ನೀಲೇಶ್ವರ ಮುನ್ಸಿಪಲ್ ಕಾರ್ಪೋರೇಷನ್‍ನ ಮಾಜಿ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಉದ್ಘಾಟಿಸಿದರು. ಮಾದಕ ವಸ್ತುಗಳ ಸೇವನೆಯಿಂದ ಸಮಾಜದಲ್ಲಿ ಬಹುದೊಡ್ಡ ಪರಿಣಾಮ ಉಂಟಾಗುತ್ತಿದೆ ಎಂದರು. ಡ್ರಗ್ ಮಾಫಿಯಾಗಳು ವಿದ್ಯಾರ್ಥಿ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ಹಿಡಿತದಿಂದ ಮುಕ್ತಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಇಂದಿನ ಮಕ್ಕಳ ತೇಜಸ್ಸು ನಾಳಿನ ಭಾರತದ ಬೆಳಕಾಗಿದ್ದು, ಪೋಷಕರಂತೆ ಅವರನ್ನು ಕಾಪಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕಾಲೇಜು ಪ್ರಾಂಶುಪಾಲ ಡಾ.ಎಂ.ವಿ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಿ.ಎಇಒ ಕೆ.ವಿ.ರಾಘವನ್ ಮಾದಕ ವಸ್ತು ವಿರೋಧಿ ತರಗತಿ ನಡೆಸಿದರು. ಮಹಾತ್ಮ ಎಜುಕೇಷನಲ್ ಸೊಸೈಟಿ ಅಧ್ಯಕ್ಷ ಡಾ.ಪಿ.ಸಿ.ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಮಾದಕ ವಸ್ತು ವಿರೋಧಿ ಸಂದೇಶ ನೀಡಿದರು. ಸಿಬ್ಬಂದಿ ಕಾರ್ಯದರ್ಶಿ ಡಾ.ಕೆ.ಕೆ.ಷಣ್ಮುಖದಾಸ್, ಕವುಂಕಲ್ ನಾರಾಯಣನ್, ಅನಘಾ ನಂಬಿಯಾರ್, ಅಬಿನ್.ಪಿ.ಬಿನೋಯ್, ಎಂ.ಸೈಲಜಾ, ಕೆ.ವಿ.ಪ್ರದೀಪನ್ ಮಾತನಾಡಿದರು. ಕಾನ್ಪೆಡ್ ಕಾರ್ಯದರ್ಶಿ ಸಿ.ಸುಕುಮಾರನ್ ಸ್ವಾಗತಿಸಿ, ಮಾಹಿತಿ ಸಹಾಯಕಿ ಎಂ.ಶ್ವೇತಾ ವಂದಿಸಿದರು.
ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮುಕ್ತ ಜಾಗೃತಿ ವಿಚಾರ ಸಂಕಿರಣ
0
ಅಕ್ಟೋಬರ್ 20, 2022