ಕುಂಬಳೆ: ಕೋಟೆಶ್ವರದ ವಕ್ವಾಡಿ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ನ ಗುರುಕುಲ ಪಬ್ಲಿಕ್ ಸ್ಕೂಲ್ ಅಂಗಣದಲ್ಲಿ ವಿವೇಕಾನಂದ ಹಾಗೂ ಶಾರದ ಮಾತೆಯ ಬೃಹತ್ ಗಾತ್ರದ ಪ್ರತಿಮೆ ರಚಿಸಿದ ಶಿಲ್ಪಿ,ಕಲಾವಿದ ಕುಂಬಳೆಯ ವೇಣುಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಆದಮಾರು ಮಠಾಧೀಶರಾದ ಶ್ರೀ ಈಶ ಪ್ರಸನ್ನ ತೀರ್ಥ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ನ ವತಿಯಿಂದ ಗೌರವಿಸಲಾಯಿತು. ಸಂಸ್ಥೆಯ ಆಧ್ಯಕ್ಷ ಅಪ್ಪಣ್ಣ ಹೆಗ್ಡೆ, ನಿರ್ಧೇಶಕರಾದ ಬಾಂಡ್ಯಾ ಸುಭಾμï ಶೆಟ್ಟಿ,ಅನುಪಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಆಖಿಲ ಕರ್ನಾಟಕ ಮಟ್ಟದಲ್ಲಿ ಕಲಾವಿದರಾಗಿ ಗುರುತಿಸಿರುವ ವೇಣುಗೋಪಾಲ ಆಚಾರ್ಯ ಆಳ್ವಾಸ್ ನುಡಿಸಿರಿ ಸಹಿತ ಹಲವೆಡೆಗಳಲ್ಲಿ ತಮ್ಮ ಕಲಾ ಪ್ರದರ್ಶನವನ್ನು ತೋರ್ಪಡಿಸುವಲ್ಲಿ ಗಮನಾರ್ಹರಾಗಿದ್ದಾರೆ. ಇತ್ತೀಚೆಗೆ ಐಸಬಾಸ್ ಎಂಬ ತುಳು ಕಿರು ಸಿನಿಮಾ ನಿರ್ಮಿಸಿ ಅಭಿನಯಿಸಿದ್ದರು.
ಶಿಲ್ಪಿ,ಕಲಾವಿದ ವೇಣುಗೋಪಾಲ ಆಚಾರ್ಯ ಕುಂಬಳೆಗೆ ಸನ್ಮಾನ
0
ಅಕ್ಟೋಬರ್ 08, 2022
Tags