ಕಾಸರಗೋಡು: ಭೂಮಿಯ ಗಡಿ ಗುರುತಿಸುವಿಕೆಗಾಗಿ ಭೂ ಉಪಗ್ರಹ ನೆರವಿನಿಂದ ಭೂಮಿಯ ಡಿಜಿಟಲ್ ರಿ-ಸರ್ವೆ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಸರ್ವೇ ಸಭೆಗಳನ್ನು ಆಯೋಜಿಸಲಾಯಿತು.
ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ 18 ಗ್ರಾಮಗಳ 110 ವಾರ್ಡ್‍ಗಳಲ್ಲಿ ಮೊದಲ ಹಂತದ ಡಿಜಿಟಲ್ ಮರು ಸಮೀಕ್ಷೆ ನಡೆಸಲಾಗುತ್ತಿದೆ. ಈ ಸ್ಥಳಗಳ ಗ್ರಾಮಸಭೆಗಳಲ್ಲಿ ಪ್ರತ್ಯೇಕ ಸರ್ವೆ ಸಭೆಗಳು ನಡೆಯಲಿದೆ. ಡಿಜಿಟಲ್ ರಿ-ಸರ್ವೆಯಲ್ಲಿ ಸಾರ್ವಜನಿಕ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ನಡೆಸಿದ 50 ಸರ್ವೆ ಸಭೆಗಳಲ್ಲಿ ಜನರ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. ಭಾಗವಹಿಸುವಿಕೆ ಕಡಿಮೆ ಇರುವ ಪ್ರದೇಶಗಳಲ್ಲಿ ಸರ್ವೆಸಭೆಗಳು ಆಯಾ ವಾರ್ಡ್ ಸದಸ್ಯರೊಂದಿಗೆ ಚರ್ಚಿಸಿ ಪುನಃ ನಡೆಸಲಾಗುವುದು. ಹೆಚ್ಚು ಜನರು ಭಾಗವಹಿಸಬಹುದಾದ ಸ್ಥಳಗಳಲ್ಲಿ ವಿಶೇಷ ವಿವರಣಾತ್ಮಕ ಸಭೆಗಳನ್ನು ನಡೆಸಲು ಭೂಮಾಪನ ಇಲಾಖೆಯು ನಿರ್ಧರಿಸಿದೆ.
ಸಮೀಕ್ಷೆ ಸಭೆಗಳಲ್ಲಿ ಭಾಗವಹಿಸುವ ಎಲ್ಲ ಜನರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಪ್ರತಿ ಪ್ರದೇಶಗಳಲ್ಲಿಯೂ ಸಮೀಕ್ಷೆಯ ಬಗ್ಗೆ ಮಾಹಿತಿ ಲಭ್ಯವಾಗುವಂತೆ ಮಾಡಲಾಗುವುದು. ಪ್ರತಿಯೊಬ್ಬ ವ್ಯಕ್ತಿಯ ಪ್ರಸ್ತುತ ಜಮೀನಿನ ಮಾಹಿತಿಯು ಮೈ ಲ್ಯಾಂಡ್ ಪೆÇೀರ್ಟಲ್ ನಲ್ಲಿ ಲಭ್ಯವಿದೆ. ಇವುಗಳನ್ನು ಪರಿಶೀಲಿಸಿ ಸರಿಪಡಿಸಲಿದ್ದರೆ ಅದಕ್ಕಿರುವ ಸೌಲಭ್ಯವೂ ಪೆÇೀರ್ಟಲ್‍ನಲ್ಲಿ ಲಭ್ಯವಿರಲಿದೆ.
ಡಿಜಿಟಲ್ ರಿ ಸರ್ವೇಯನ್ನು ನವೆಂಬರ್ 1 ರಂದು ಬೆಳಗ್ಗೆ 11ಕ್ಕೆ ರಾಜ್ಯ ಬಂದರು, ಪುರಾತತ್ವ, ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆ ಸಚಿವ ಅಹಮ್ಮದ್ ದೇವರ್ ಕೋವಿಲ್ ಉದ್ಘಾಟಿಸಲಿದ್ದಾರೆ. ಶಾಸಕ ಎನ್. ಎ. ನೆಲ್ಲಿಕುನ್ನು ಅಧ್ಯಕ್ಷ ರಾಗಿರುವರು. ಸಂಸದರು, ಶಾಸಕರು, ಜನಪ್ರತಿನಿಧಿಗಳೇ ಮೊದಲಾದವರು ಭಾಗವಹಿಸಲಿದ್ದಾರೆ. ಮುಟ್ಟತ್ತೋಡಿ ಗ್ರಾಮದಲ್ಲಿ ಮೊದಲು ಮರು ಸಮೀಕ್ಷೆ ನಡೆಸಲಾಗುವುದು, ಎಲ್ಲಾ ವಿಭಾಗದ ಜನರು ಡಿಜಿಟಲ್ ಮರು ಸಮೀಕ್ಷೆಗೆ ಸಹಕರಿಸಬೇಕು ಎಂದು ಸಮೀಕ್ಷೆ ಅನುಷ್ಠಾನದ ಜಿಲ್ಲಾ ಮಟ್ಟದ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಸೂಚಿಸಿದ್ದಾರೆ.
ಡಿಜಿಟಲ್ ಸರ್ವೇ ಸಾರ್ವಜನಿಕ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ನಡೆಯಲಿದೆ ಸರ್ವೆ ಸಭೆಗಳು
0
ಅಕ್ಟೋಬರ್ 21, 2022
Tags